ಸಂಚಾರಿ ನಿಯಮ ಪಾಲನೆ; ಜಾಗೃತಿ ಜಾಥಾ

7

ಸಂಚಾರಿ ನಿಯಮ ಪಾಲನೆ; ಜಾಗೃತಿ ಜಾಥಾ

Published:
Updated:
Prajavani

ವಿಜಯಪುರ: ರೋಟರಿ ಕ್ಲಬ್‌ ಬಿಜಾಪುರ ಉತ್ತರ, ಚೆನ್ನೈನ ರೋಟರಿ ಕ್ಲಬ್‌ ರಾಯಲ್ಸ್‌ನ ನಾಲ್ವರು ಮಹಿಳೆಯರು ಈಚೆಗೆ ನಗರದಲ್ಲಿ ಬೀದಿ ನಾಟಕ ಮೂಲಕ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು.

ಅಂದಾಜು 3 ಸಾವಿರ ಕಿ.ಮೀ ರಸ್ತೆ ಸಂಚಾರ ನಡೆಸಿ, ಐದು ರಾಜ್ಯಗಳ 10 ಜಿಲ್ಲೆಗಳಲ್ಲಿ ಈಗಾಗಲೇ ಜಾಗೃತಿ ಮೂಡಿಸಿರುವ ಜಯಲತಾ ಮೋರ್ಟಸ್‌, ರುಕ್ಮಿಣಿ, ಅನು, ಅಜಯ್ ಒಳಗೊಂಡ ತಂಡ, ನಗರದ ಹೃದಯ ಭಾಗ ಮಹಾತ್ಮ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಕೇಂದ್ರ ಬಸ್‌ ನಿಲ್ದಾಣದವರೆಗೆ ಬೀದಿ ನಾಟಕ ಪ್ರದರ್ಶಿಸಿ, ಜನರಿಗೆ ಸಂಚಾರ ನಿಯಮ ಪಾಲನೆಯ ಮಹತ್ವ ಕುರಿತು ಅರಿವು ಮೂಡಿಸಿದರು.

ಸಿಪಿಐ ಭೀಮನಗೌಡ ಬಿರಾದಾರ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ರೋಟರಿ ಕ್ಲಬ್ ಉತ್ತರ ಅಧ್ಯಕ್ಷ ಡಾ.ಅಶೋಕ ವಾಲಿ, ಕಾರ್ಯದರ್ಶಿ ಹರ್ಷ ಶಹಾ, ರಾಜು ಬಿಜ್ಜರಗಿ, ಗುರುಶಾಂತ ನಿಡೋಣಿ, ರವಿ ಶಿಲ್ಲೇದಾರ, ಉದಯ ಯಾಳವಾರ, ಸಂತೋಷ ಔವರಸಂತ, ದಿಲೀಪ ಪೂಜಾರಿ, ಮಲ್ಲು ಕಲಾದಗಿ, ನವನಾಥ ಕಲ್ಯಾಣ, ಅನಿಲ ಮುರಗೋಡ, ಬಸವಪ್ರಭು ಕಡಪಟ್ಟಿ, ಪ್ರಸನ್ನ ಅಜರೇಕರ, ವಿಠ್ಠಲ ತೇಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !