ಕಾಂಗ್ರೆಸ್‌ನಲ್ಲಿ ‘ಛಲ’; ಜೆಡಿಎಸ್‌ ಅಚಲ..!

ಶನಿವಾರ, ಮಾರ್ಚ್ 23, 2019
24 °C
ಭಾನುವಾರದ ಬಳಿಕ ಸ್ಪಷ್ಟ ಚಿತ್ರಣ; ಸರಣಿ ಸಭೆ

ಕಾಂಗ್ರೆಸ್‌ನಲ್ಲಿ ‘ಛಲ’; ಜೆಡಿಎಸ್‌ ಅಚಲ..!

Published:
Updated:

ವಿಜಯಪುರ: ಹೊಂದಾಣಿಕೆಯಲ್ಲಿ ‘ಕೈ’ ತಪ್ಪಿದ ವಿಜಯಪುರ ಕ್ಷೇತ್ರ ಮರಳಿ ಪಡೆಯಲು ಕಾಂಗ್ರೆಸ್‌ ಮುಖಂಡರು ಛಲ ತೊಟ್ಟು, ಸರ್ವ ಪ್ರಯತ್ನ ನಡೆಸಿದರೆ; ಕ್ಷೇತ್ರ ನಮಗೆ ಉಳಿಯಲಿದೆ ಎಂಬ ಅಚಲ ವಿಶ್ವಾಸ ಜೆಡಿಎಸ್‌ ನಾಯಕರದ್ದಾಗಿದೆ.

ರಾಜಧಾನಿ ಬೆಂಗಳೂರಿನಲ್ಲೇ ಬೀಡು ಬಿಟ್ಟಿರುವ ಜೆಡಿಎಸ್‌ ಜಿಲ್ಲಾ ಘಟಕದ ಪ್ರಮುಖರು, ತಮ್ಮಗೊಲಿದ ಕ್ಷೇತ್ರ ಉಳಿಸಿಕೊಳ್ಳುವ ಜತೆ, ಕಾಂಗ್ರೆಸ್‌ ಸಹಮತದೊಂದಿಗೆ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ.

ಜೆಡಿಎಸ್‌ ಅಗ್ರೇಸರ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಗುರುವಾರ ರಾತ್ರಿ ನಡೆಸಿದ ಸಭೆಯಲ್ಲಿ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮೂವರು ಆಕಾಂಕ್ಷಿಗಳ ಅಂತಿಮ ಪಟ್ಟಿಯೊಂದನ್ನು ಸಲ್ಲಿಸಿದರು ಎಂಬುದು ಮೂಲಗಳಿಂದ ತಿಳಿದು ಬಂದಿದೆ.

‘ನಾಗಠಾಣ ಶಾಸಕ ದೇವಾನಂದ ಚವ್ಹಾಣ ಪತ್ನಿ ಸುನೀತಾ ಚವ್ಹಾಣ, ಸಹೋದರ ರವಿ ಚವ್ಹಾಣ, ಮಾಜಿ ಶಾಸಕ ಆರ್.ಕೆ.ರಾಠೋಡ ಪುತ್ರ, ಜೆಡಿಎಸ್‌ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುನೀಲ ರಾಠೋಡ ಹೆಸರು ಪ್ರಸ್ತಾಪವಾಗಿವೆ’ ಎಂಬುದು ಗೊತ್ತಾಗಿದೆ.

‘ವಿಜಯಪುರ ಜಿಲ್ಲೆಯವರೇ ಜೆಡಿಎಸ್‌ ಅಭ್ಯರ್ಥಿಯಾಗಬೇಕು. ಹೊರಗಿನವರಿಗೆ ಮಣೆ ಹಾಕಬಾರದು. ಸಚಿವ ಎಂ.ಸಿ.ಮನಗೂಳಿ, ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ನೇತೃತ್ವದಲ್ಲಿ ಕೋರ್ ಕಮಿಟಿ ರಚಿಸಿಕೊಂಡು, ಚುನಾವಣಾ ಅಖಾಡಕ್ಕಿಳಿಯಬೇಕು’ ಎಂಬ ನಿರ್ಣಯಗಳನ್ನು ಜಿಲ್ಲಾ ಘಟಕ ತೆಗೆದುಕೊಂಡಿದ್ದು, ವರಿಷ್ಠರಿಗೆ ಸಲ್ಲಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಮಾಜಿ ಕೇಂದ್ರ ಸಚಿವೆ ರತ್ನಮಾಲಾ ಸವಣೂರ ಟಿಕೆಟ್ ಆಕಾಂಕ್ಷಿಯಾಗಿದ್ದು ಲಾಬಿ ನಡೆಸಿದ್ದಾರೆ. ಜಿಲ್ಲೆಯ ಮುಖಂಡರ ಸಹಕಾರ ಕೋರಿದ್ದಾರೆ ಎಂಬುದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !