ಪ್ರಚಾರದಲ್ಲಿ ಪ್ರಶ್ನೆ; ಜಿಗಜಿಣಗಿ ತಬ್ಬಿಬ್ಬು..!

ಶನಿವಾರ, ಏಪ್ರಿಲ್ 20, 2019
31 °C

ಪ್ರಚಾರದಲ್ಲಿ ಪ್ರಶ್ನೆ; ಜಿಗಜಿಣಗಿ ತಬ್ಬಿಬ್ಬು..!

Published:
Updated:

ವಿಜಯಪುರ: ಬಿಜೆಪಿ ಹುರಿಯಾಳು ರಮೇಶ ಜಿಗಜಿಣಗಿ ಮಂಗಳವಾರ ವಿಜಯಪುರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಭಾಭವನದಲ್ಲಿ ಮತ ಯಾಚಿಸಿದ ಸಂದರ್ಭ, ವಕೀಲರೊಬ್ಬರು ಪ್ರಶ್ನೆಗಳ ಸುರಿಮಳೆಗೈದರು.

ಜಿಲ್ಲಾ ವಕೀಲರ ಸಂಘದ ಸಭಾ ಭವನದಲ್ಲಿ ಸಭೆ ಆಯೋಜನೆಯಾಗಿತ್ತು. ಜಿಗಜಿಣಗಿ ಮಾತನಾಡಿ, ಮತ ಯಾಚಿಸಿದರು. ಈ ಸಂದರ್ಭ ವಕೀಲ ತಿಪ್ಪಣ್ಣ ದೊಡಮನಿ ಜಿಗಜಿಣಗಿ ಅವರನ್ನು ಪ್ರಶ್ನಿಸಲು ಆರಂಭಿಸಿದರು.

ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದೀರಿ. ಜಿಲ್ಲೆಗೆ ನಿಮ್ಮ ಕೊಡುಗೆ ಏನು ? ಎಂದು ಪ್ರಶ್ನೆಗಳ ಸರಣಿ ಆರಂಭಿಸಿದರು. ಸಭಿಕರಲ್ಲಿದ್ದ ಕೆಲ ವಕೀಲರೇ ತಿಪ್ಪಣ್ಣ ಅವರನ್ನು ಮನವೊಲಿಸಲು ಮುಂದಾದರೂ; ದೊಡಮನಿ ತಮ್ಮ ಪ್ರಶ್ನಾವಳಿ ಮುಂದುವರೆಸಿದರು. ಜಿಗಜಿಣಗಿ ಇದರಿಂದ ಮುಜುಗರಕ್ಕೊಳಪಟ್ಟು, ತಬ್ಬಿಬ್ಬುಗೊಂಡರು.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !