ಪ್ರತ್ಯೇಕತಾವಾದಿ ಮುಖಂಡ ಯಾಸಿನ್‌ ಮಲ್ಲಿಕ್ ಬಂಧನ

7
ಮಿರ್ವಾಜ್ ಉಮರ್ ಫರೂಕ್ ಗೃಹ ಬಂಧನ

ಪ್ರತ್ಯೇಕತಾವಾದಿ ಮುಖಂಡ ಯಾಸಿನ್‌ ಮಲ್ಲಿಕ್ ಬಂಧನ

Published:
Updated:
ಯಾಸಿನ ಮಲ್ಲಿಕ್

ಶ್ರೀನಗರ:  ಪ್ರತ್ಯೇಕತಾವಾದಿಗಳ ಪ್ರತಿಭಟನೆಯನ್ನು ತಡೆಯುವುದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್‌ ಫ್ರಂಟ್‌ (ಜೆಕೆಎಲ್‌ಎಫ್) ಅಧ್ಯಕ್ಷ ಯಾಸಿನ್‌ ಮಲ್ಲಿಕ್‌ನನ್ನು ಮೈಸೂಮ ನಿವಾಸದಲ್ಲಿ ಗುರುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಹುರಿಯತ್ ಕಾನ್ಫರೆನ್ಸ್ (ಎಮ್) ಅಧ್ಯಕ್ಷ ಮಿರ್ವಾಜ್ ಉಮರ್ ಫರೂಕ್ ಅವರನ್ನು ನಿಗೀನ್ ನಿವಾಸದಲ್ಲಿ ಹಾಗೂ ಹುರಿಯತ್ ಕಾನ್ಫರೆನ್ಸ್(ಜಿ) ಅಧ್ಯಕ್ಷ ಸಯ್ಯದ್ ಅಲಿ ಶಾ ಗಿಲಾನಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಮಲ್ಲಿಕ್‌ರನ್ನು ಕೋತಿಬಾಗ್ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

‘ರೈಸಿಂಗ್ ಕಾಶ್ಮೀರ್‌’ ಪತ್ರಿಕೆಯ ಸಂಪಾದಕ ಶುಜಾತ್‌ ಬುಖಾರಿ ಹತ್ಯೆ ಖಂಡಿಸಿ ಗುರುವಾರ ಕೈಗೊಂಡ ಪ್ರತ್ಯೇಕತಾವಾದಿಗಳ ಹೋರಾಟವನ್ನು ನಿಲ್ಲಿಸುವುದಕ್ಕಾಗಿ ಈ ಇಬ್ಬರು ಪ್ರತ್ಯೇಕತಾವಾದಿ ಮುಖಂಡರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರತ್ಯೇಕತಾವಾದಿಗಳು ಜೆಆರ್‌ಎಲ್ ಬ್ಯಾನರ್ ಅಡಿಯಲ್ಲಿ ಮಂಗಳವಾರ ಪ್ರತಿಭಟನೆಗೆ ಕರೆ ನೀಡಿದ್ದರು. 

 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !