ಕೆ.ಸಿ.ವ್ಯಾಲಿ ನೀರು ತೃತೀಯ ಹಂತದ ಸಂಸ್ಕರಣೆ

7

ಕೆ.ಸಿ.ವ್ಯಾಲಿ ನೀರು ತೃತೀಯ ಹಂತದ ಸಂಸ್ಕರಣೆ

Published:
Updated:

ಬೆಂಗಳೂರು: ‘ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 126 ಕೆರೆಗಳಿಗೆ ನೀರು ತುಂಬಿಸುವ ಕೆ.ಸಿ (ಕೋರಮಂಗಲ–ಚಲ್ಲಘಟ್ಟ) ವ್ಯಾಲಿ ಯೋಜನೆಯ ನೀರ ನ್ನು ಮೂರನೇ ಹಂತದಲ್ಲಿ ಸಂಸ್ಕ ರಿಸಲು ಯೋಜಿಸಲಾಗಿದೆ’ ಎಂದು ಸಣ್ಣ ನೀರಾವರಿ ಸಿ.ಎಸ್‌. ಸಚಿವ ಪುಟ್ಟರಾಜು ಹೇಳಿದರು.

‘ಈ ಸಂಬಂಧ ಮುಖ್ಯಮಂತ್ರಿ ಜತೆಗೆ ಸಮಾಲೋಚನೆ ನಡೆಸಲಾಗಿದೆ. ಪ್ರಕ ರಣ ಈಗ ಹೈಕೋರ್ಟ್‌ನಲ್ಲಿದ್ದು, ತೀರ್ಪು ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾ ರವು ಜಿಲ್ಲೆಯ 126 ಕೆರೆಗಳಿಗೆ 5 ಟಿಎಂಸಿ ನೀರು ತುಂಬಿಸಲು ₹1,280 ಕೋಟಿ ಅಂದಾಜು ವೆಚ್ಚದಲ್ಲಿ ಕೆ.ಸಿ.ವ್ಯಾಲಿ ಯೋಜನೆ ಕೈಗೆತ್ತಿಕೊಂಡಿತ್ತು. ಕೊಳಚೆ ನೀರನ್ನು ಸಂಸ್ಕ ರಿಸಿ ಮೂರೂ ಜಿಲ್ಲೆಗಳಿಗೆ ಹರಿಸುವ ಈ ಯೋಜನೆಗೆ 2016ರ ಜೂನ್‌ನಲ್ಲಿ ಚಾಲನೆ ಸಿಕ್ಕಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !