ಸಾಧನೆಗೆ ಪರಿಶ್ರಮ ಮುಖ್ಯ; ಮುರುಘೇಂದ್ರ

ಮಂಗಳವಾರ, ಜೂನ್ 25, 2019
26 °C
ಪಂಡಿತ್ ಮಡಿವಾಳಯ್ಯ ಸಾಲಿಗೆ ಪಂ.ಕೆ.ಎಸ್.ಹಡಪದ ಪ್ರಶಸ್ತಿ ಪುರಸ್ಕಾರ 2019 ಪ್ರದಾನ

ಸಾಧನೆಗೆ ಪರಿಶ್ರಮ ಮುಖ್ಯ; ಮುರುಘೇಂದ್ರ

Published:
Updated:
Prajavani

ಮೈಸೂರು: ‘ಸಾಧನೆಗೆ ಪರಿಶ್ರಮವೇ ಮುಖ್ಯವಾದುದು’ ಎಂದು ಅಬಕಾರಿ ಇಲಾಖೆಯ ರಕ್ಷಕ ಮುರುಘೇಂದ್ರ ತಿಳಿಸಿದರು.

ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಭಾನುವಾರ ರಾತ್ರಿ ನಡೆದ ಪಂ.ಕೆ.ಎಸ್.ಹಡಪದ ಪ್ರಶಸ್ತಿ ಪುರಸ್ಕಾರ–2019 ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶ್ರದ್ಧೆ, ಭಕ್ತಿಯಿಂದ ಕೆಲಸ ಮಾಡಿದರೆ ಉನ್ನತ ಸಾಧನೆ ಕಟ್ಟಿಟ್ಟ ಬುತ್ತಿ’ ಎಂದು ಹೇಳಿದರು.

‘ಗುರಿಯಿಲ್ಲದೆ, ಗುರುವಿಲ್ಲದೆ ಉನ್ನತ ಸಾಧನೆಗೈಯುವುದು ಕಷ್ಟಸಾಧ್ಯ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ತಬಲಾ ಸಂಗೀತ ಕಲಿಕೆ ಜತೆಗೆ ಇನ್ನಿತರ ಪ್ರಕಾರಗಳಿಗೂ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

‘ಹುಟ್ಟಿದ ಮನುಷ್ಯ ಸಾಯುವುದು ಖಚಿತ. ಹುಟ್ಟು–ಸಾವಿನ ನಡುವೆ ಸಾಧನೆ ಮೂಲಕ ನಮ್ಮ ಛಾಪು ಉಳಿಯುವಂತೆ ಮಾಡಬೇಕು. ನಾವಿಲ್ಲದಿದ್ದರೂ ನಮ್ಮ ಸಾಧನೆ ಮಾತನಾಡಬೇಕು’ ಎಂದು ಹೇಳಿದರು.

ಬೀದರ್ ಜಿಲ್ಲೆಯ ಹುಮನಾಬಾದ್‌ನ ಪಂಡಿತ್ ಮಡಿವಾಳಯ್ಯ ಸಾಲಿ ಅವರಿಗೆ ‘ ಪಂ.ಕೆ.ಎಸ್.ಹಡಪದ ಪ್ರಶಸ್ತಿ ಪುರಸ್ಕಾರ–2019’ ಪ್ರಶಸ್ತಿ ಪ್ರದಾನ ಮಾಡಿದ ಸಂಗೀತಗಾರರಾದ ಪಂಡಿತ್ ಇಂದೂಧರ ನಿರೋಡಿ ಕೆ.ಎಸ್.ಹಡಪದ, ಸಾಲಿ ಅವರೊಟ್ಟಿಗಿನ ಒಡನಾಟವನ್ನು ನೆನಪು ಮಾಡಿಕೊಂಡರು. ಸಾಲಿ ಸಾಧನೆಯನ್ನು ಬಣ್ಣಿಸಿದರು.

ಪ್ರಶಸ್ತಿ ಸ್ವೀಕರಿಸಿದ ಮಡಿವಾಳಯ್ಯ ಸಾಲಿ ತಮ್ಮ ತಬಲಾ ಗುರುಗಳಾದ ಪಂಡಿತ್ ಕೆ.ಎಸ್.ಹಡಪದ ಜತೆಗಿನ ಒಡನಾಟ, ಅವರು ತಬಲಾ ಕಲಿತ ಬಗೆಯನ್ನು ನೆರೆದಿದ್ದ ಜನಸ್ತೋಮದ ಎದುರು ಬಿಚ್ಚಿಟ್ಟರು.

ಪಂ.ಮಡಿವಾಳಯ್ಯ ಸಾಲಿ ಶಿಷ್ಯ, ಚಲನಚಿತ್ರ ಸಂಗೀತ ನಿರ್ದೇಶಕ ಸುರೇಂದ್ರ ಮಾತನಾಡಿ, ಸಾಲಿ ಅವರ ಯಶೋಗಾಥೆ ಬಿಂಬಿಸಿದರು. ವಿದ್ಯಾರ್ಥಿ ವೃಂದಕ್ಕೆ ತಡರಾತ್ರಿವರೆಗೂ ತಬಲಾ ಕಲಿಕೆಯ ಪಾಠ ಹೇಳಿಕೊಟ್ಟ ಪರಿಯನ್ನು ಎಳೆ ಎಳೆಯಾಗಿ ಸಮಾರಂಭದಲ್ಲಿ ವಿವರಿಸಿದರು.

ನರರೋಗ ತಜ್ಞ ಡಾ.ಎಂ.ಎಸ್.ಭಾಸ್ಕರ್, ಪಂಡಿತ್ ವೀರಭದ್ರಯ್ಯ ಹಿರೇಮಠ ಮಾತನಾಡಿದರು. ಪಂಚಮಿ ಬಿದನೂರ ಪ್ರಾರ್ಥಿಸಿದರು. ಪ್ರಶಸ್ತಿ ಪ್ರದಾನದ ಬಳಿಕ ಪಂ.ಮಡಿವಾಳಯ್ಯ ಸಾಲಿ, ಹಾರ್ಮೋನಿಯಂ ವಾದಕ ದೀಪಕ್ ನಾಗಣ್ಣವರ್ ನಡೆಸಿಕೊಟ್ಟ ತಬಲಾ ಸೋಲೋ ನೆರೆದಿದ್ದವರ ಪ್ರಶಂಸೆಗೆ ಪಾತ್ರವಾಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !