ಕಾಬುಲ್‌ನಲ್ಲಿ ಬಾಂಬ್‌ ದಾಳಿ: 26 ಸಾವು

7

ಕಾಬುಲ್‌ನಲ್ಲಿ ಬಾಂಬ್‌ ದಾಳಿ: 26 ಸಾವು

Published:
Updated:
Deccan Herald

ಕಾಬುಲ್‌: ಇಲ್ಲಿನ ಮೇವಾಂಡ್‌ದ ಸ್ಪೋರ್ಟ್‌ ಕ್ಲಬ್‌ನಲ್ಲಿ ಗುರುವಾರ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿದ್ದು, 26ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಇಬ್ಬರು ಪತ್ರಕರ್ತರೂ ಮೃತಪಟ್ಟಿದ್ದಾರೆ. 91ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಆತ್ಮಹತ್ಯಾ ಬಾಂಬರ್‌ನೊಬ್ಬ ಪ್ರವೇಶದ್ವಾರದಲ್ಲಿ ಕಾವಲುಗಾರನಿಗೆ ಗುಂಡಿಟ್ಟು ಕೊಂದು, ನಂತರ ಕುಸ್ತಿ ತರಬೇತಿ ಕೊಠಡಿ ಬಳಿ ಸ್ಫೋಟಿಸಿಕೊಂಡಿದ್ದಾನೆ. ಇದಾಗಿ ತಾಸಿನ ನಂತರ, ಸ್ಫೋಟಕಗಳನ್ನು ಒಳಗೊಂಡಿದ್ದ ಕಾರು ಸ್ಪೋರ್ಟ್‌ ಕ್ಲಬ್‌ ಮುಂಭಾಗ ಸ್ಫೋಟಗೊಂಡಿದೆ. ಪತ್ರಕರ್ತರು ಹಾಗೂ ತುರ್ತು ಕಾರ್ಯನಿರ್ವಹಣಾಕಾರರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. 

ಅಫ್ಗಾನಿಸ್ತಾನದ ಪ್ರಮುಖ ಮಾಧ್ಯಮ ಸಂಸ್ಥೆ ‘ಟೊಲೊ ನ್ಯೂಸ್‌’ನ ಇಬ್ಬರು ಪತ್ರಕರ್ತರು ಸಾವಿಗೀಡಾಗಿದ್ದಾರೆ. ನಾಲ್ವರು ಪತ್ರಕರ್ತರು ಗಾಯಗೊಂಡಿದ್ದಾರೆ.

‘ಎಲ್ಲಿ ನೋಡಿದರೂ ರಕ್ತವೇ ಕಾಣುತ್ತಿತ್ತು. ಗಾಯಗೊಂಡವರು ತಮ್ಮ ಪ್ರೀತಿಪಾತ್ರರಿಗಾಗಿ ಕೂಗುತ್ತಿದ್ದರು’ ಎಂದು ಗಾಯಾಳು, 14 ವರ್ಷದ ಕುಸ್ತಿಪಟು ಸೈಯದ್‌ ರೊಹುಲ್ಲಾಹ್‌ ಹೇಳಿದ್ದಾರೆ. 

ಇಸ್ಲಾಮಿಕ್‌ ಸ್ಟೇಟ್‌ ಗುಂಪು ದಾಳಿಯ ಹೊಣೆ ಹೊತ್ತಿದೆ. ಅಫ್ಗಾನಿಸ್ತಾನದ ಮತ್ತು ವಿಶ್ವದ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !