ಕಡೇ ಕಾರ್ತೀಕ: ಕಾದ ಎಣ್ಣೆಯಲ್ಲಿ ಕಜ್ಜಾಯ ತೆಗೆದ ಅರ್ಚಕ

7
ಕುದಿಯುವ ಎಣ್ಣೆಯನ್ನೇ ಭಕ್ತರ ಮೇಲೆ ಎರಚಿದ ಅರ್ಚಕ

ಕಡೇ ಕಾರ್ತೀಕ: ಕಾದ ಎಣ್ಣೆಯಲ್ಲಿ ಕಜ್ಜಾಯ ತೆಗೆದ ಅರ್ಚಕ

Published:
Updated:

ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿಯ ಸಿದ್ದಪ್ಪಾಜಿ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರದ ಪ್ರಯುಕ್ತ ಕಜ್ಜಾಯ ಪವಾಡ ನಡೆಯಿತು.

ದೇವಾಲಯದ ಅರ್ಚಕ ಕುದಿಯುತ್ತಿದ್ದ ಎಣ್ಣೆಯಲ್ಲಿ ಮೂರು ಬಾರಿ ಕಜ್ಜಾಯ ಕರಿದರು. ಆ ಬಿಸಿ ಎಣ್ಣೆಯನ್ನೇ ತೀರ್ಥ ರೂಪದಲ್ಲಿ ಭಕ್ತರ ಮೇಲೆ ಎರಚಿದರು.

5 ವರ್ಷಗಳಿಂದ ಕಜ್ಜಾಯ ಪವಾಡ ನಡೆಯುತ್ತಿದೆ. ಈ ಹಿಂದೆ, ದೇವಾಲಯದಲ್ಲಿ ಕೊಂಡ ನಡೆಸಲಾಗುತ್ತಿತ್ತು. ಈಚೆಗೆ ಕುದಿಯುವ ಎಣ್ಣೆಯಲ್ಲಿ ಕಜ್ಜಾಯ ತೆಗೆಯುವುದು, ಆ ಎಣ್ಣೆಯನ್ನೇ ತೀರ್ಥ ರೂಪದಲ್ಲಿ ಭಕ್ತರ ಮೇಲೆ ಎರಚುವ ಸಂಪ್ರದಾಯ ನಡೆದು ಬಂದಿದೆ. ಅರ್ಚಕರು ಕಾದ ಎಣ್ಣೆಯಲ್ಲಿ ಕೈ ಹಾಕಿ ಕಜ್ಜಾಯ ತೆಗೆಯುತ್ತಾರೆ. ಅದೇ ಎಣ್ಣೆಯನ್ನೂ ಎರಚಿದಾಗ ಯಾರಿಗೂ ಅನಾಹುತ ಆಗಿಲ್ಲ ಎಂದು ಗ್ರಾಮದ ಮಹಿಳೆಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !