ಕಡಣಿ: ನಗದು ಕದ್ದು, ಆಡು ಕೊಂದ ಕಳ್ಳರು

7

ಕಡಣಿ: ನಗದು ಕದ್ದು, ಆಡು ಕೊಂದ ಕಳ್ಳರು

Published:
Updated:

ಆಲಮೇಲ: ಇಲ್ಲಿಗೆ ಸಮೀಪದ ಕಡಣಿ ಗ್ರಾಮದಲ್ಲಿ ಬುಧವಾರ ರಾತ್ರಿ ಕಳ್ಳರು ಇಂದ್ರಜಿತ್ ಕ್ಷತ್ರಿ ಎಂಬುವರಿಗೆ ಸೇರಿದ ಅಂಗಡಿ ಬೀಗ ಮುರಿದು, ₹ 9000 ನಗದು ಕದ್ದೊಯ್ದಿದ್ದಾರೆ. ಅಂಗಡಿಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

ನಂತರ ಹಿಂದಿನ ಓಣಿಯಲ್ಲಿನ ಮಜೀನ ಅಬೂಬುಕರ್ ನದಾಫ್ ಅವರ ಮನೆ ಮುಂದೆ ಕಟ್ಟಿದ್ದ ಆಡನ್ನು ಚಾಕುವಿನಿಂದ ತಿವಿದು ಸಾಯಿಸಿದ್ದಾರೆ. ಸಿದ್ದಪ್ಪ ಅಂಬಣ್ಣ ಪರೀಟ್ ಅವರ ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಆಲಮೇಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಜ.1ರಂದು ದೇವಣಗಾಂವ ಗ್ರಾಮದಲ್ಲಿ 8 ಮನೆಗಳಲ್ಲಿ ಸರಣಿ ಕಳ್ಳತನ ನಡೆದ ಬೆನ್ನಲ್ಲೆ, ಮತ್ತೆ ಕಳ್ಳತನ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಪೊಲೀಸರು ಈ ಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !