ವೃತ್ತಿ ಅನುಭವ ಟ್ರಂಪ್‌ ಸೋಲಿಸಲು ನೆರವು: ಕಮಲಾ ಹ್ಯಾರಿಸ್‌

ಶುಕ್ರವಾರ, ಜೂನ್ 21, 2019
23 °C

ವೃತ್ತಿ ಅನುಭವ ಟ್ರಂಪ್‌ ಸೋಲಿಸಲು ನೆರವು: ಕಮಲಾ ಹ್ಯಾರಿಸ್‌

Published:
Updated:
Prajavani

ಪಶ್ಚಿಮ ಕೊಲಂಬಿಯಾ (ಎಪಿ): ವಕೀಲ ವೃತ್ತಿಯ ಅನುಭವ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಎದುರಿಸಲು ನೆರವಾಗಲಿದೆ ಎಂದು ಭಾರತೀಯ ಸಂಜಾತೆ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ತಿಳಿಸಿದ್ದಾರೆ. 

ಎನ್ಎಎಸಿಪಿ ರಾಜ್ಯಮಟ್ಟದ ಸಮ್ಮೇಳನದಲ್ಲಿ ಅವರು ಅಧ್ಯಕ್ಷ ಟ್ರಂಪ್‌ ವಿರುದ್ಧ ಟೀಕೆಗಳ ಸುರಿಮಳೆ ಗೈದಿದ್ದಾರೆ. 

‘ನಾಲ್ಕು ವರ್ಷಗಳ ಆಡಳಿತದ ಅವಧಿಯಲ್ಲಿ ನಡೆದ ಅನ್ಯಾಯಗಳಿಗೆ ಟ್ರಂಪ್‌ ಅವರನ್ನು ಹೊಣೆಗಾರನನ್ನಾಗಿಸಬೇಕು. ನಾನು ಹಲವು ಪ್ರಕರಣಗಳ ವಿಚಾರಣೆ ನಡೆಸಿದ್ದೇನೆ. ಆದರೆ ಇಷ್ಟೊಂದು ಸಾಕ್ಷ್ಯಗಳು ಇರುವ ಪ್ರಕರಣದ ವಿಚಾರಣೆ ನಡೆಸಿದ್ದು ವಿರಳ’ ಎಂದು ಟ್ರಂಪ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ. 

‘ನೀನು ಯಾರು ಎಂಬುದನ್ನು ಜನರಿಗೆ ಹೇಳಲು ಬಿಡದೇ, ಅವರಿಗೆ ನೀನೆ ಯಾರೆಂಬುದನ್ನು ತಿಳಿಸು ಎಂದು ಅಮ್ಮ ಹೇಳುತ್ತಾರೆ. ನಾನು ಅದನ್ನೇ ಮಾಡುತ್ತಿದ್ದೇನೆ’ ಎಂದು ಹ್ಯಾರಿಸ್‌ ತಿಳಿಸಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ಅವರನ್ನು ರಕ್ಷಿಸಲು ಬದ್ಧವಾಗಿರುವುದಾಗಿ ತಿಳಿಸಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !