ತಿಕೋಟಾದ ಕನಮಡಿ ಧರಿದೇವರ ಜಾತ್ರೆ ವಿಧ್ಯುಕ್ತ ಆರಂಭ

ಭಾನುವಾರ, ಮೇ 26, 2019
28 °C

ತಿಕೋಟಾದ ಕನಮಡಿ ಧರಿದೇವರ ಜಾತ್ರೆ ವಿಧ್ಯುಕ್ತ ಆರಂಭ

Published:
Updated:

ತಿಕೋಟಾ: ತಾಲ್ಲೂಕಿನ ಕನಮಡಿ ಗ್ರಾಮದ ಧರಿದೇವರ ಜಾತ್ರೆ ಆರಂಭಗೊಂಡಿದ್ದು, ಏ.24ರವರೆಗೆ ನಡೆಯಲಿದೆ.

ಏ.22ರ ಸೋಮವಾರ ಮುಂಜಾನೆ 5ಕ್ಕೆ ಧರಿದೇವರ ಗದ್ದುಗೆಗೆ ಮಹಾ ಪೂಜೆ, ಸಂಜೆ 5ಕ್ಕೆ ದೇವರ ಕುದುರೆ ಜಕ್ಕಮ್ಮ ತಾಯಿ ದರ್ಶನ, ಸೇವಕರಿಂದ ಮಹಾ ಮಂಗಳಾರತಿ, ರಾತ್ರಿ 9ರಿಂದ ಪ್ರವಚನ ಹಾಗೂ ಶಿವಭಜನೆ ನಡೆಯಲಿವೆ.

23ರ ಮಂಗಳವಾರ ಬೆಳಿಗ್ಗೆ ಧರಿದೇವರ ಮಹಾ ಪೂಜೆ, ನೈವೇದ್ಯ, ಅನ್ನ ಸಂತರ್ಪಣೆ, ಸಂಜೆ 5ಕ್ಕೆ ಮಹಾಪೂಜೆ ನಡೆಯಲಿದೆ.

24ರ ಬುಧವಾರ ನಂದಿಕೋಲ ಮೆರವಣಿಗೆ, ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಸಂಜೆ 7ಕ್ಕೆ ಧರಿದೇವರ ಗುಡ್ಡದಿಂದ ಕನಮಡಿ ಗ್ರಾಮಕ್ಕೆ ಪಲ್ಲಕ್ಕಿ ತೆರಳುವುದು ಎಂದು ಜಾತ್ರಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !