ದೈವತ್ವಕ್ಕೇರಿದ ಜನಭಾಷೆ ಕನ್ನಡ; ಮನಗೂಳಿ

7
ಕರ್ನಾಟಕ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ

ದೈವತ್ವಕ್ಕೇರಿದ ಜನಭಾಷೆ ಕನ್ನಡ; ಮನಗೂಳಿ

Published:
Updated:
Deccan Herald

ವಿಜಯಪುರ: ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ ಮೂಡಿಬಂದ ಜನಮಾನಸದ ಮಂತ್ರವೇ ಕನ್ನಡ ನುಡಿ. ಎರಡು ಸಹಸ್ರ ವರ್ಷಗಳ ಸುದೀರ್ಘ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಈ ಜನಭಾಷೆಯನ್ನು ದೈವತ್ವಕ್ಕೆ ಕೊಂಡೊಯ್ದ ಕೀರ್ತಿ ಬಸವಾದಿ ಶರಣರಿಗೆ ಸಲ್ಲಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವದ ಸಂದೇಶ ನೀಡಿದ ಸಚಿವರು, ‘ಬಸವಾದಿ ಶರಣರ ಮೂಲವನ್ನು ಗಮನಿಸಿದಾಗ, ವಿಜಯಪುರವೇ ಜನ್ಮಭೂಮಿ ಎಂಬುದು ನಮ್ಮೆಲ್ಲರ ಹೆಮ್ಮೆ’ ಎಂದರು.

‘ಕನ್ನಡ ಕೇವಲ ಭಾಷೆಯಲ್ಲ. ಭಾವನೆಗಳ ಸಂಯೋಜನೆ. ದ್ರಾವಿಡ ಭಾಷೆಗಳಲ್ಲಿಯೇ ಅಗ್ರಸ್ಥಾನ ಪಡೆದ ಹಿರಿಮೆ ಸವಿಗನ್ನಡದ್ದು. ಜಗತ್ತಿನ 6000 ಭಾಷೆಗಳಲ್ಲಿ ಪ್ರಸಿದ್ಧ ಸಮೃದ್ಧ ಭಾಷೆಗಳಲ್ಲಿ ಕನ್ನಡ ಮೊದಲ 30 ಭಾಷೆಗಳಲ್ಲಿ ಒಂದಾಗಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

‘ಪ್ರತಿ ಮನೆಯಲ್ಲೂ ಮಕ್ಕಳಲ್ಲಿನ ಇಂಗ್ಲಿಷ್‌ ಪದಗಳ ವ್ಯಾಮೋಹವನ್ನು ಬಿಡಿಸಿ, ಕನ್ನಡವೆಂದರೆ ಕೀಳರಿಮೆಯಲ್ಲ. ಅದು ಪವಿತ್ರ ಭಾಷೆ ಎಂಬ ಮನೋಭಾವನೆ ಬೆಳೆಸಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು. ಕನ್ನಡ ಭಾಷೆ ಎಂದರೆ ಮಾತೃವಿನಷ್ಟೇ ಪವಿತ್ರ ಎಂಬ ಮನೋಭೂಮಿಕೆಯನ್ನು ಬೆಳೆಸುವುದು ಅಗತ್ಯವಾಗಿದೆ’ ಎಂದು ಮನಗೂಳಿ ಪ್ರತಿಪಾದಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮೇಯರ್‌ ಶ್ರೀದೇವಿ ಲೋಗಾಂವಿ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿ.ಪಂ.ಸಿಇಒ ವಿಕಾಸ್‌ ಕಿಶೋರ್‌ ಸುರಳ್ಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ ಉಪಸ್ಥಿತರಿದ್ದರು.

**

ನವೆಂಬರ್ 1ರ ಕನ್ನಡಿಗರಾಗದೆ ಜೀವಮಾನದ ಕೊನೆಯುಸಿರಿರುವರೆಗೂ ಕನ್ನಡವನ್ನೇ ಉಸಿರಾಡುವ ಕನ್ನಡಿಗರಾಗಬೇಕಾಗಿದೆ.
–ಎಂ.ಸಿ.ಮನಗೂಳಿ, ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !