‘ಕನ್ನಡ ಓದಿದವರು ಉದ್ಧಾರವಾಗುವುದಿಲ್ಲವೇ?’

7
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ

‘ಕನ್ನಡ ಓದಿದವರು ಉದ್ಧಾರವಾಗುವುದಿಲ್ಲವೇ?’

Published:
Updated:
Prajavani

ಬೆಂಗಳೂರು: ‘ಕನ್ನಡವನ್ನು ತುಳಿಯಲು ಸರ್ಕಾರ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಮುಂದಾಗಿದೆ. ಹಾಗಾದರೆ ಕನ್ನಡ ಶಾಲೆಗಳಲ್ಲಿ ಓದಿದವರು ಉದ್ಧಾರವಾಗುವುದಿಲ್ಲವೇ’ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಪ್ರಶ್ನಿಸಿದರು.

ಕುವೆಂಪು ಅವರ ಜನ್ಮದಿನದ ಅಂಗವಾಗಿ ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂಗ್ಲಿಷ್ ಕೇವಲ ಅನಿವಾರ್ಯ ಭಾಷೆ. ಇತರ ರಾಜ್ಯಗಳಲ್ಲಿ ಅವರ ಭಾಷೆಯಲ್ಲಿಯೇ ವ್ಯವಹಾರ ನಡೆಸುತ್ತಾರೆ. ಆದರೆ, ಕರ್ನಾಟಕದಲ್ಲಿ ತಂದೆ-ತಾಯಿಯನ್ನು ಕರೆಯಲೂ ಇಂಗ್ಲಿಷ್ ಅನ್ನೇ ಬಳಸುವಷ್ಟು ರೋಗ ಬಂದಿದೆ’ ಎಂದರು.

ಹಿರಿಯ ಪತ್ರಕರ್ತೆ ಡಾ.ವಿಜಯಾ, 'ಸರ್ಕಾರವು ರಾಜ್ಯದಲ್ಲಿರುವ ನೂರಾರು ಸಮಸ್ಯೆಗಳನ್ನು ಮೂಲೆಗುಂಪು ಮಾಡಲು ಇಂಗ್ಲಿಷ್ ಮಾಧ್ಯಮ ಆರಂಭಿಸಲು ಹೆಜ್ಜೆಯಿಟ್ಟಿದೆ. ಅದನ್ನು ಜಾರಿಗೆ ತರುತ್ತಾರೋ ಇಲ್ಲವೋ? ಸದ್ಯಕ್ಕೆ ಎಲ್ಲರನ್ನೂ ಚರ್ಚಿಸಲು ತಳ್ಳಿ ಬಹುದೊಡ್ಡ ಸಮಸ್ಯೆಗಳನ್ನು ಮುಚ್ಚಿಹಾಕಲು ರಾಜಕೀಯ ಹುನ್ನಾರ ನಡೆಸುತ್ತಿದೆ’ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ, 'ಕುವೆಂಪು ಅವರ ಸಾಹಿತ್ಯವನ್ನು ಎಲ್ಲಾ ಭಾಷೆಗಳಿಗೂ ಅನುವಾದಗೊಳಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು.
ನಿಂತು ಹೋಗಿರುವ ರಾಷ್ಟ್ರಕವಿ ಪ್ರಶಸ್ತಿಯನ್ನು ಹತ್ತು ವರ್ಷಗಳಿಗೊಮ್ಮೆ ನೀಡಲು ಆರಂಭಿಸಬೇಕು’ ಎಂದು ಹೇಳಿದರು.

ಅಬ್ದುಲ್ ಬಷೀರ್, 'ಎಚ್‌.ಡಿ.ಕುಮಾರಸ್ವಾಮಿ ಸಾವಿರ ಹೇಳಿದರೆ ಅವರ ಸಹೋದರ ರೇವಣ್ಣ ಇನ್ನೂ ಸಾವಿರ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಆರಂಭಿಸುವುದಾಗಿ ಹೇಳುತ್ತಾರೆ. ಇದರಿಂದ ಸರ್ಕಾರದಲ್ಲಿ ಸ್ಪರ್ಧೆ ಏರ್ಪಟ್ಟಿದೆ' ಎಂದು ವ್ಯಂಗ್ಯವಾಡಿದರು.

ಕುವೆಂಪು ಗೀತೆಗಳ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಒಂಬತ್ತು ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 18

  Happy
 • 2

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !