ಕಪಾಲಿ ಮೋಹನ್ ಶರಣು; ಸಿಸಿಬಿ ವಿಚಾರಣೆ

7

ಕಪಾಲಿ ಮೋಹನ್ ಶರಣು; ಸಿಸಿಬಿ ವಿಚಾರಣೆ

Published:
Updated:
Deccan Herald

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‌ ಬಳಿಯ ಆರ್‌.ಜಿ.ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಪರಾರಿಯಾಗಿದ್ದ ಫೈನಾನ್ಶಿಯರ್ ವಿ.ಕೆ ಅಲಿಯಾಸ್ ಕಪಾಲಿ ಮೋಹನ್‌, ಸ್ಥಳೀಯ ನ್ಯಾಯಾಲಯಕ್ಕೆ ಇತ್ತೀಚೆಗೆ ಶರಣಾಗಿದ್ದಾರೆ.

ಅಕ್ರಮ ಜೂಜು ಅಡ್ಡೆ ನಡೆಸುತ್ತಿದ್ದ ಆರೋಪದಡಿ ಮೋಹನ್‌ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಆರೋಪಿ, ಸಿಸಿಬಿ ಅಧಿಕಾರಿಗಳ ಎದುರು ವಿಚಾರಣೆಗಾಗಿ ಶುಕ್ರವಾರ ಹಾಜರಾದರು. 

‘ಸಿನಿಮಾ ನಿರ್ಮಾಪಕನೂ ಆದ ಮೋಹನ್‌, ಹಲವು ವರ್ಷಗಳಿಂದ ಅಕ್ರಮ ಜೂಜು ಅಡ್ಡೆ ನಡೆಸುತ್ತಿದ್ದ. ಪ್ರಕರಣದ ತನಿಖೆ ನಡೆಯುತ್ತಿದ್ದು, ಈಗ ಆತ ವಿಚಾರಣೆಗೆ ಬಂದಿದ್ದಾನೆ. ಆತನ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್‌ ಹೇಳಿದರು.

ಮನೆ, ಕಚೇರಿ ಮೇಲೂ ದಾಳಿ: ಕ್ಲಬ್‌ ಮೇಲೆ ದಾಳಿ ನಡೆಸಿದ್ದ ಬಳಿಕ ಸಿಸಿಬಿ ಪೊಲೀಸರು, ಆರೋಪಿಯ ಸದಾಶಿವನಗರದ ಎಲ್‌ಪಿಓ ರಸ್ತೆ ಹಾಗೂ ರಾಜ್‌ಮಹಲ್ ಗುಟ್ಟಹಳ್ಳಿ ಮನೆ ಮತ್ತು ಪಿ.ಜಿ.ಹಳ್ಳಿಯ ವಿನಾಯಕ್ ವೃತ್ತದಲ್ಲಿರುವ ‘ಬಾಲಾಜಿ ಫೈನಾನ್ಸ್‌’ ಕಚೇರಿ ಮೇಲೂ ದಾಳಿ ಮಾಡಿದ್ದರು. ಮನೆ– ಕಚೇರಿಯಲ್ಲಿ ಸ್ಟ್ಯಾಂಪ್‌ ಪೇಪರ್, ಖಾಲಿ ಚೆಕ್ ಹಾಗೂ ನೋಟ್‌ ಪುಸ್ತಕಗಳು ಸಿಕ್ಕಿವೆ. ಅವುಗಳ ಬಗ್ಗೆ ಪೊಲೀಸರು, ಆರೋಪಿಯಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !