ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಸಿನ ಅದ್ಭುತ ಇಳುವರಿ, ಸಣ್ಣೀರುಳ್ಳಿ ಬೋನಸ್ !

Last Updated 31 ಮಾರ್ಚ್ 2020, 7:26 IST
ಅಕ್ಷರ ಗಾತ್ರ

ಜನವರಿ 28ರಂದು ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರದ ಯುವಕೃಷಿಕ ನಿರಂಜನರ ವಾಟ್ಸಪ್ ಸಂದೇಶ, 'ಸರ್ಅರಿಸಿನಬಹಳ ಚೆನ್ನಾಗಿದೆ. ಎಕರೆಗೆ 250 ರಿಂದ 300 ಕ್ವಿಂಟಲ್ಇಳುವರಿಬರಬಹುದೆಂದು ಅಂದಾಜಿಸಿದ್ದೇವೆ'. ಮಾರ್ಚ್ 4ರಂದು ಮತ್ತೊಂದು ಸಂದೇಶ ‘ನಾಲ್ಕೆಕರೆ ಅರಿಶಿಣದಲಿ ಸಿಕ್ಕ ಒಟ್ಟು ಹಸಿ ಅರಿಶಿಣ 1400 ಕ್ವಿಂಟಲ್ (ತಾಯಿಗಡ್ಡೆ ಹೊರತುಪಡಿಸಿ); ಎಕರೆಗೆ ಸರಾಸರಿ 311 ಕ್ವಿಂಟಲ್; ತಾವು ನೀಡಿದ ಸಲಹೆ-ಸಹಕಾರಕ್ಕೆ ಧನ್ಯವಾದಗಳು'ಹೆಮ್ಮೆಯಲಿ ಹೇಳಿದ್ದು ನಿರಂಜನರ ತಮ್ಮ ನಾಗಾರ್ಜುನರು.

ನಂಬಲಾಗಲಿಲ್ಲ, ಖಾತ್ರಿಪಡಿಸಿಕೊಳ್ಳಲು ಫೋನಾಯಿಸಿ ಹತ್ತಾರು ಪ್ರಶ್ನೆ ಕೇಳಿದ ಮೇಲೆ ನಂಬಲೇಬೇಕಾ ಯಿತು. ಎಕರೆಗೆ 150ರಿಂದ 200 ಕ್ವಿಂಟಲ್ಇಳುವರಿಬರುವುದನ್ನು ನೋಡಿ-ಕೇಳಿದ್ದ ನನಗೆ, ಇದು ಅತ್ಯದ್ಭುತ ಎನಿಸಿತು. ಹತ್ತಾರು ವರ್ಷಗಳಿಂದ ಅರಿಶಿಣ ಬೆಳೆಯುತ್ತಿರುವ ಕೆಲ ಕೃಷಿಕರಿಗೆ ಕರೆ ಮಾಡಿ ಕೇಳಿದೆ, ಅವರೂ ಅಚ್ಚರಿಪಟ್ಟರು.

ಇಳುವರಿಗೆ ಏನು ಕಾರಣ?

ಅರಿಸಿನದ ಸಲುವಾಗಿ ವರ್ಷಗಳಿಂದ ತೋಟಗಾರಿಕಾ ವಿಶ್ವವಿದ್ಯಾಲಯದ ಸಂಪರ್ಕದಲ್ಲಿದ್ದರೂ, ಇವರಿಗೆ ಸುಧಾರಿತ ತಳಿಗಳಾದ ಪ್ರಗತಿ/ಪ್ರತಿಭಗಳ ಬಗೆಗೆ ಗೊತ್ತಿರಲಿಲ್ಲ.ಇಳುವರಿಕೇಳಿ, ಅವರಿಗೆ ಫೋನಾಯಿಸಿ, ‘ನೀವು ಬೆಳೆದಿರುವುದು ಪ್ರಗತಿನಾ ಅಥವಾ ಪ್ರತಿಭ ತಳಿಯಾ‘ ಎಂದು ಕೇಳಿದ್ದೆ. ಅದಕ್ಕೆ ಅವರು ‘ಸಾರ್ ಅದ್ಯಾವ್ದೂ ಅಲ್ಲ, ನಮ್ದೇ ಲೋಕಲ್‘ ಎಂದಿದ್ದರು. ನನಗೆ ಆಶ್ಚರ್ಯವಾಯ್ತು. ಮುಂದಿನ ಪ್ರಶ್ನೆ ‘ಒಂದೊಂದು ಗಿಡದಲ್ಲಿ ಹಸಿಅರಿಸಿನಎಷ್ಟು ಬಂದಿರಬಹುದು?; ‘ಕನಿಷ್ಠ ಒಂದೂವರೆ ಕೆ.ಜಿ, ಜಾಸ್ತಿ ಅಂದ್ರೆ ಐದು ಕೆ.ಜಿವರೆಗೂ ಬಂದಿದೆ, ತೂಕ ನೋಡಿದ್ವಿ‘ ಅವರ ಮಾರುತ್ತರ. ಗಿಡವೊಂದಕ್ಕೆ ನಾನ್ನೂರು ಗ್ರಾಂನಿಂದ ಒಂದು ಕೆ.ಜಿವರೆಗೆ ನೋಡಿದ್ದ ನನಗೆ ತಲೆ ಬಿಸಿಯಾಯ್ತು. ಆ ಕಡೆಯಿಂದ ತೂಕಮಾಪಕದ ಮೇಲಿಟ್ಟ ಹಸಿ ಅರಿಸಿನದ ಕೆಲ ಚಿತ್ರಗಳನ್ನು ಕೂಡಲೇ ವಾಟ್ಸಪ್‍ಗೆ ಕಳಿಸಿ, ಸಾಕ್ಷ್ಯ ತೋರಿಸಿದರು. ಜತೆಗೆ ‘ನಮ್ಮಲ್ಲಿ ಪ್ರತೀ ಸಲ ಬಿತ್ತನೆ ಅರಿಶಿಣದ ಆಯೋದು ಅವ್ವ‘ ಎಂದರು. ಆಗ ಅವರ ತಾಯಿಯೊಳಡ ಗಿರುವಅದ್ಭುತತಳಿ ವಿಜ್ಞಾನಿಯ ಚಿತ್ರ ಹಾಗೇ ನನ್ನ ಕಣ್ಣ ಮುಂದೆ ಬಂದೋಯ್ತು.

ಅವ್ವ ಆಯ್ದ ಬಿತ್ತನೆ ಗಡ್ಡೆ
ಅರಿಸಿನಕೃಷಿಕರು ಕಟಾವಾದ ನಂತರ, ಮುಂದಿನ ಬೆಳೆಗಾಗಿ ಬಿತ್ತನೆ ತೆಗೆದಿಡುವುದು ವಾಡಿಕೆ. ಅವರಲ್ಲಿ ಬಹುತೇಕರು ವಿಶೇಷ ಕ್ರಮಗಳನ್ನೇನೂ ಪಾಲಿಸುವುದಿಲ್ಲ. ಹೆಚ್ಚೆಂದರೆ ರೋಗ-ಕೀಟ ಮುಕ್ತ ಗಡ್ಡೆಗಳನ್ನಾ ರಿಸಿ ಒಂದೆರಡು ತಿಂಗಳು ಶೇಖರಿಸಿಟ್ಟು ನಾಟಿಗೆ ಬಳಸುತ್ತಾರೆ. ಈ ವಿಚಾರದಲ್ಲಿ ನಿರಂಜನರ ತಾಯಿ ಕ್ರಮ ತುಸು ಭಿನ್ನ. ಗಡ್ಡೆ ಅಗೆದಾಗ ಅವರು ನೋಡುವುದು ಗಿಡವೊಂದರಲ್ಲಿರುವ ಗಡ್ಡೆಗಳ ಗಾತ್ರ; ರೋಗ-ಕೀಟ ಮುಕ್ತತೆ; ಸಿಕ್ಕದ್ದನ್ನೆಲ್ಲ ಬಿತ್ತನೆಗಾಗಿ ಆರಿಸದಿರುವುದು; ಬಿತ್ತನೆ ಆಯುವ ಕೆಲಸವನ್ನು ಮಕ್ಕಳಿಗೆ ಬಿಡದಿರುವುದು; ನಮಗೆ ತಿಳಿಯದ ಅವರು ಬಿಟ್ಟುಕೊಡದ ಇನ್ನೂ ಕೆಲ ಸೂಕ್ಷ್ಮಗಳಿರಬಹುದು.

ನನ್ನ ಅನುಭವ ಮತ್ತು ವೈಜ್ಞಾನಿಕ ತಿಳುವಳಿಕೆಯ ಆಧಾರದಲ್ಲಿ, ಅರಿಸಿನದಂತ ಬೆಳೆಗಳಲ್ಲಿ, ಉತ್ತಮಇಳುವರಿಪಡೆಯುವಲ್ಲಿ ಬಿತ್ತನೆ ಆಯ್ಕೆ ಮಹತ್ವದ ಅಂಶ. ಅವರೊಳಗೊಬ್ಬಅದ್ಭುತತಳಿ ವಿಜ್ಞಾನಿ ಇರುವ ಪರಿ ಅವರಿಗಾಗಲಿ, ಮಕ್ಕಳಿಗಾಗಲಿ ಇರಲೇ ಇಲ್ಲ. ವಿಜ್ಞಾನಿಗಳಿಗೆ ಆ ತರಹದ ಗಡ್ಡೆ ಸಿಕ್ಕಿ ಅಧಿಕಇಳುವರಿಬಂದಿದ್ದರೆ, ಅದನ್ನು ಸಂಶೋಧನಾ ಲೇಖನದ ಮೂಲಕ ವಿಜ್ಞಾನ ಪ್ರಪಂಚಕ್ಕೆ ತಿಳಿಸಿ ಬೀಗಿಬಿಡುತ್ತಾರೆ. ಆದರೆ, ಈ ತಾಯಿ-ಮಕ್ಕಳ ಸಾಧನೆ ಶಿವಪುರದಾಚೆಗೆ ತಿಳಿಯದಿರುವುದು ನನಗೆ ಸೋಜಿಗ.

‘ನಿರಂಜನ್ 4 ಕೆ.ಜಿಯಿಂದ 5 ಕೆ.ಜಿ ಗೂ ಹೆಚ್ಚು ತೂಕ ಬಂದಿರುವ ಗಡ್ಡೆಗಳನ್ನು ಪ್ರತ್ಯೇಕವಾಗಿಡಿ, ಮುಂದಿನ ಸಲ ಈ ಗಡ್ಡೆಯಿಂದ ಹೀಗೆಇಳುವರಿಬಂದರೆ ನಿಮ್ಮ ಹೆಸರಿನಲ್ಲಿಯೇ ಶಿವಪುರದ ತಳಿಯನ್ನು ನೋಂದಾಯಿಸೋಣ‘ ಎಂದೆ. ‘ಅದೆಲ್ಲ ಯಾಕೆ ಬಿಡಿ ಸಾರ್, ಅದರಲ್ಲೇನಂತ ವಿಶೇಷ ಇಲ್ಲ‘ ಎಂದರು. ನಿರಂಜನರಿಗೆ ಅದು ಬೌದ್ಧಿಕ ಆಸ್ತಿಯ ಹಕ್ಕೆಂಬುದರ ಪರಿವೇ ಇರಲಿಲ್ಲವೆನ್ನಿ.

ಯಶಸ್ಸಿಗೆ ಮತ್ತೇನು ಕಾರಣ?
ಗಡ್ಡೆ ಬೆಳೆಗಳಿಗೆ ಭೂಮಿ ತಯಾರಿ ಬಹು ಮುಖ್ಯ. ಇವರ ಮರಳುಮಿಶ್ರಿತ ಕೆಂಪುಗೋಡು ಮಣ್ಣು ಅರಿಸಿನಕ್ಕೆ ಹೇಳಿ ಮಾಡಿಸಿದಂತಿತ್ತು. ಬಹಳ ಮುತುವರ್ಜಿಯಿಂದ ಮೊದಲು ಆಳ ಉಳುಮೆ, ನಂತರ ರೋಟವೇಟರ್, ತದನಂತರ ಎರಡು ಸಲ ಕಲ್ಟಿವೇಟರ್ ಹಾಕಿಸಿ ಒಳ್ಳೆಯ ಹದಕ್ಕೆ ತಂದು ಎಕರೆಗೆ 12 ಟನ್ ಕಳಿತ ಹಟ್ಟಿಗೊಬ್ಬರ ಹಾಕಿ ಏರು ಮಡಿ ಮಾಡಿ ಅರಿಶಿಣ ನಾಟಿ ಮಾಡಿದ್ದರು. ನಾಟಿಗೆ ಮೊದಲು 200 ಕೆ.ಜಿ ಜಿಪ್ಸಂ ಹಾಕಿದ್ದರು. ಇದೊಂದು ವೈಜ್ಞಾನಿಕ ಕ್ರಮ. ಈ ಸಲ ಭೂಮಿ ತಯಾರಿ, ರೋಗ ಹಾಗೂ ಪೋಷಕಾಂಶ ನಿರ್ವಹಣೆಗೆ ಹೆಚ್ಚು ಒತ್ತು ನೀಡಿದ್ದರು. ಹನಿ ನೀರಾವರಿ ವ್ಯವಸ್ಥೆಯೂ ಇತ್ತು, ಬೇಕಾದಷ್ಟು ಪೋಷಕಾಂಶಗಳನ್ನು ಹಂತಹಂತವಾಗಿ ನೀಡಿ, ಕಳೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ದ್ದರು. ಆರು ತಿಂಗಳ ನಂತರ ಎಕರೆಗೆ 10 ಕೆ.ಜಿ ಸಲ್ಫೇಟ್ ಆಪ್ ಪೊಟ್ಯಾಷನ್ನು ನೀಡಿದ್ದೂ ಸಹ ಉತ್ತಮ ಕ್ರಮ. ತೋಟಗಾರಿಕೆ ವಿವಿಯಿಂದ ಸೂಕ್ತ ಸಮಯದಲ್ಲಿ ರೋಗ ನಿರ್ವಹಣೆ ಮತ್ತು ಪೋಷಕಾಂಶ ಕೊರತೆ ಪತ್ತೆಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ಸಿಕ್ಕ ನೆರವನ್ನು ತಪ್ಪದೇ ಅವರು ಸ್ಮರಿಸುತ್ತಾರೆ.

ಸದ್ಯಅರಿಸಿನರೇಟು ಕಡಿಮೆ

ಆರಕ್ಕೇರದ ಮೂರಕ್ಕಿಳಿಯದ ದರ ಅರಿಸಿನದ್ದು. ಕನಿಷ್ಠ ಕ್ವಿಂಟಲ್‍ಗೆ ₹5ಸಾವಿರ, ಗರಿಷ್ಠ ₹10 ಸಾವಿರ. ಈ ವರ್ಷ ಆರು ಸಾವಿರದ ಆಸು-ಪಾಸಿನಲ್ಲಿದೆ. ಎಕರೆಗೆ ಸರಾಸರಿ 25 ಕ್ವಿಂಟಲ್ ಸಂಸ್ಕರಿಸಿದಇಳುವರಿ. ಹೆಚ್ಚಿನ ಕೃಷಿಕರಿಗೆ ಎಕರೆಗೆ ಸಿಗುವ ಆದಾಯ ₹1.50 ಲಕ್ಷಗಳು; ಖರ್ಚು ತೆಗೆದರೆ ಉಳಿಯುವುದು ತೀರಾ ಕಡಿಮೆ.ಅದ್ಭುತಇಳುವರಿತೆಗೆದಿರುವ ಈ ಕೃಷಿಕರಿಗೆ ಸಿಕ್ಕಿರುವ ಲಾಭ ಹೆಚ್ಚು. ಕೃಷಿಕರೆಲ್ಲರೂ ಉತ್ಪಾದಕತೆ ಹೆಚ್ಚಿಸುವ ಕಡೆಗೆ ಹೆಚ್ಚು ಒತ್ತು ಕೊಡಬೇಕೆಂಬುದು ಇವರ ಆಶಯ. ಹೆಚ್ಚು ಕೃಷಿಕರು ಸಾಂಬಾರ ಈರುಳ್ಳಿ ಬೆಳೆಯುವುದರಿಂದ, ಈಅರಿಸಿನ-ಸಣ್ಣೀರುಳ್ಳಿಕೃಷಿಯಿಂದ ತಕ್ಕ ಮಟ್ಟಿನ ಲಾಭ ಗ್ಯಾರಂಟಿ.ಅರಿಸಿನಕೃಷಿಯ ಖರ್ಚನ್ನು ಸಣ್ಣೀರುಳ್ಳಿಯೇ ದುಡಿದುಕೊಡುತ್ತದೆ, ದರ ಹೆಚ್ಚು ಸಿಕ್ಕರೆ ಒಂದಷ್ಟು ಲಾಭವನ್ನೂ.

ಈ ಬಾರಿ ನಿರಂಜನರ ಮನೆಯಲ್ಲೂಸಣ್ಣೀರುಳ್ಳಿಅರಿಸಿನಕೃಷಿಯ ಖರ್ಚು ಕೊಟ್ಟು, ಮೇಲೊಂದಿಷ್ಟು ಲಾಭ ಕೊಟ್ಟಿದೆ. ಬಿತ್ತಿದ ಎಪ್ಪತ್ತು ದಿನಗಳಿಗೆ ಕಟಾವಾದ ಸಣ್ಣೀರುಳ್ಳಿಯಇಳುವರಿಎಕೆರೆಗೆ ಬರೋಬ್ಬರಿ 77 ಕ್ವಿಂಟಲ್. ನಾಲ್ಕೂವರೆ ಎಕರೆಯಲಿ ಸಿಕ್ಕಿದ್ದು 350 ಕ್ವಿಂಟಲ್.ಸಣ್ಣೀರುಳ್ಳಿತಂದುಕೊಟ್ಟ ಲಾಭ ದೊಡ್ಡದು. ₹10 ಲಕ್ಷಕ್ಕೂ ತುಸು ಹೆಚ್ಚು.

ಈ ವರ್ಷವೂ ನಿರಂಜನರ ಮನೆಯಲ್ಲಿಅರಿಸಿನಕೃಷಿ ಮುಂದುವರಿಯುತ್ತದೆ. ಅವ್ವ ಪ್ರತಿ ವರ್ಷದಂತೆ ಆಯ್ದಿಟ್ಟಿರುವ ‘ಶಿವಪುರದ ಬಿತ್ತನೆ’ಗಡ್ಡೆಗಳೂ ಜೊತೆಗಿವೆ. ವೈಜ್ಞಾನಿಕವಾಗಿ ಸಹಕರಿಸಿ ಸಲಹೆ ನೀಡಲು ತೋಟಗಾರಿಕೆ ವಿವಿಯೂ ಸಹ ಇದೆ. ಎಂಬಿಎ ಓದಿರುವ ಅಣ್ಣ ನಿರಂಜನರ, ಪಿಹೆಚ್‍ಡಿ ಓದುತ್ತಿರುವ ತಮ್ಮ ನಾಗಾರ್ಜುನರ ಅದಮ್ಯ ಕೃಷಿ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ.

ಅರಿಸಿನಕೃಷಿಯ ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆಗಳು 97426 53108 / 91640 498080.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT