ಶನಿವಾರ, ಜನವರಿ 16, 2021
28 °C

ವಿವಿಧ ಮಹಾನಗರಪಾಲಿಕೆಯ 1,694 ಹುದ್ದೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ಮಹಾನಗರ ಪಾಲಿಕೆ–ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಮಹಾನಗರಪಾಲಿಕೆಗಳಲ್ಲಿನ (ಬಿಬಿಎಂಪಿ ಹೊರತುಪಡಿಸಿ) ವಿವಿಧ ವೃಂದದ 1,694 ಹುದ್ದೆಗಳನ್ನು ರದ್ದುಪ‍ಡಿಸಲು ಮತ್ತು ಆಟೋಮೊಬೈಲ್‌ ಎಂಜಿನಿಯರ್‌ 7 ಹುದ್ದೆಗಳನ್ನು ಸೃಜಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.

ಮಹಾನಗರಪಾಲಿಕೆಗಳ ಹಲವು ವೃಂದಗಳ ಹುದ್ದೆಗಳನ್ನು ರದ್ದುಪಡಿಸಿ ಸೂಪರಿಟೆಂಡೆಂಟ್‌ ಎಂಜಿನಿಯರ್‌ 10 ಮತ್ತು ಅಟೋಮೊಬೈಲ್‌ ಎಂಜಿನಿಯರ್‌ 14 ಹುದ್ದೆಗಳನ್ನು ಸೃಜಿಸುವಂತೆ ಸರ್ಕಾರಕ್ಕೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಪ್ರಸ್ತಾವ ಸಲ್ಲಿಸಿದ್ದರು. ಅದರ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಯಾವ ಹುದ್ದೆ ರದ್ದು: ಸಹಾಯಕ ಕೌನ್ಸಿಲ್‌ ಕಾರ್ಯದರ್ಶಿ–10, ಇನ್ವೆಂಟರಿ ಅಧಿಕಾರಿ–10, ಸಮುದಾಯ ಸಂಘಟನಾಧಿಕಾರಿ–38, ಪಶು ಸಂಗೋಪಾನಾ ನಿರೀಕ್ಷಕ –10, ಆಹಾರ ನಿರೀಕ್ಷಕ–12, ಶೀಘ್ರ ಲಿಪಿಗಾರ– 186, ಸಮುದಾಯ ಸಂಘಟಕರು– 152, ಸಹಾಯಕ ಯುಜಿಡಿ ಆಪರೇಟರ್‌– 190, ಮುಖ್ಯ ತೋಟಗಾರಿಕಾ ಮಾಲಿ– 38, ವಾಟರ್ ಸಪ್ಲೈ ಹೆಲ್ಪರ್‌– 608, ಕಾಮಗಾರಿ ನಿರೀಕ್ಷಕರು–380, ಪಶು ಸಂಗೋಪನಾಧಿಕಾರಿ–10, ಎಲೆಕ್ಟ್ರೀಷಿಯನ್‌ ದರ್ಜೆ 1– 50.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು