ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಪಿ. ಅಸುಂಡಿ, ರಮಾಗೆ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ

Last Updated 31 ಡಿಸೆಂಬರ್ 2020, 16:24 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2020–21ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಗೌರವ ಪ್ರಶಸ್ತಿಗೆ ಧಾರವಾಡದ ಆರ್‌.ಪಿ. ಅಸುಂಡಿ ಹಾಗೂ ಹರಿಹರಪುರದ ರಮಾ ಅರವಿಂದ ಆಯ್ಕೆಯಾಗಿದ್ದಾರೆ.

ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಸಂಗೀತ ಮತ್ತು ನೃತ್ಯ ಕ್ಷೇತ್ರದ ಸಾಧಕರನ್ನು ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ ಸೇರಿದಂತೆ ಏಳು ವಿಭಾಗಗಳಿಂದ 16 ಕಲಾವಿದರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿಯು ತಲಾ ₹ 50 ಸಾವಿರ ಹಾಗೂ ವಾರ್ಷಿಕ ಪ್ರಶಸ್ತಿ ತಲಾ ₹ 25 ಸಾವಿರ ನಗದು ಬಹುಮಾನ ಹೊಂದಿದೆ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆಬ್ರುವರಿ 6ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

‘ಕರ್ನಾಟಕ ಕಲಾಶ್ರೀ’ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರು

ಕರ್ನಾಟಕ ಸಂಗೀತ

1. ಮಧೂರು ಪಿ. ಬಾಲಸುಬ್ರಹ್ಮಣ್ಯಂ, ಉಡುಪಿ (ಹಾಡುಗಾರಿಕೆ)

2. ಸುಕನ್ಯಾ ರಾಂಗೋಪಾಲ್, ಬೆಂಗಳೂರು (ಘಟಂ)

3. ಸುರೂಳಿ ಗಣೇಶ್ ಮೂರ್ತಿ, ಚಿಕ್ಕಮಗಳೂರು (ಮೃದಂಗ)

4. ವಿ. ಮುರುಳಿ, ಶ್ರೀರಂಗಪಟ್ಟಣ (ನಾದಸ್ವರ)

ಹಿಂದೂಸ್ತಾನಿ ಸಂಗೀತ

1. ಶ್ರೀಪಾದ ಹೆಗಡೆ, ಧಾರವಾಡ (ಗಾಯನ)

2. ಪಂ. ರಾಜಪ್ರಭು ದೋತ್ರೆ, ಬೆಳಗಾವಿ (ಗಾಯನ)

3. ಟಿ. ರಂಗ ಪೈ ತೋನ್ಸೆ, ಉಡುಪಿ (ತಬಲಾ)

ನೃತ್ಯ

1. ನಯನಾ ರೈ, ಪುತ್ತೂರು (ನೃತ್ಯ ಗುರು)

2. ಪ್ರವೀಣ್ ಕುಮಾರ್, ಬೆಂಗಳೂರು (ಭರತನಾಟ್ಯ)

3. ಮಧು ನಟರಾಜ್, ಬೆಂಗಳೂರು (ಕಥಕ್)

4. ಜಿ. ಗುರುಮೂರ್ತಿ, ತುಮಕೂರು (ನೃತ್ಯ–ಮೃದಂಗ)

ಸುಗಮ ಸಂಗೀತ

1. ಉಪಾಸನಾ ಮೋಹನ್, ಮಂಡ್ಯ

ಕಥಾಕೀರ್ತನ ‌

1.ವೈಕುಂಠದತ್ತ ಮಹಾರಾಜ (ಭಾಗವತರ), ಬೀದರ್

2. ಜಿ. ಸೋಮಶೇಖರದಾಸ್, ತುಮಕೂರು

ಗಮಕ

1.ಎಚ್.ಎಸ್. ಗೋಪಾಲ್, ಶಿವಮೊಗ್ಗ (ಗಮಕ ವ್ಯಾಖ್ಯಾನ)

ವಿಶೇಷ ಪ್ರಶಸ್ತಿ

1. ಗಣೇಶ್ ಭಟ್, ಮೈಸೂರು (ಕೀಬೋರ್ಡ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT