ಸೋಮವಾರ, ಏಪ್ರಿಲ್ 19, 2021
28 °C

ಇನ್ನೂ 19 ಮುಖಂಡರ ಸಿ.ಡಿ ಬಿಡುಗಡೆ ಸಾಧ್ಯತೆ: ರಾಜಶೇಖರ ಮುಲಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ‘ರಾಜ್ಯದ ಇನ್ನೂ 19 ರಾಜಕೀಯ ಮುಖಂಡರ ಲೈಂಗಿಕ ಹಗರಣಗಳ ಸಿ.ಡಿ. ಬಿಡುಗಡೆಯಾಗುವ ನಿರೀಕ್ಷೆ ಇದೆ’ ಎಂದು ಸಾಮಾಜಿಕ ಕಾರ್ಯಕರ್ತ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಜಶೇಖರ ಮುಲಾಲಿ ಹೇಳಿದರು.

‘ವಿವಿಧ ಪಕ್ಷಗಳ ಶಾಸಕರು, ಸಚಿವರು ಮತ್ತು ಸಂಸದರು ಸೇರಿದಂತೆ ಮುಖಂಡರ ಲೈಂಗಿಕ ಹಗರಣಗಳ ಸಿ.ಡಿಗಳನ್ನು ಕೆಲವರು ಸಿದ್ಧಪಡಿಸಿಟ್ಟಿರುವುದು ಗೊತ್ತಾಗಿದೆ. ಎರಡು ದಿನದ ಹಿಂದೆ ಸಿ.ಡಿ. ಬಿಡುಗಡೆಯ ನೇತೃತ್ವ ವಹಿಸಬೇಕು ಎಂದು ಕೋರಿ ಒಬ್ಬರು ಕರೆ ಮಾಡಿದ್ದರು. ಸಾಹಿತ್ಯ ಪರಿಷತ್‌ನ ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಸಾಧ್ಯವಿಲ್ಲ ಎಂದಿದ್ದೆ’ ಎಂದು ನಗರದಲ್ಲಿ ಬುಧವಾರ ತಿಳಿಸಿದರು. ಆದರೆ ಕರೆ ಮಾಡಿದವರು ಯಾರು ಎಂಬುದನ್ನು ತಿಳಿಸಲಿಲ್ಲ.

‘ರಾಜಕಾರಣಿಗಳನ್ನು ಸಿಲುಕಿಸಿ  ಬ್ಲ್ಯಾಕ್‌ಮೇಲ್‌ ಮಾಡುವ ಏಜೆನ್ಸಿಗಳಿವೆ. ರಮೇಶ ಜಾರಕಿಹೊಳಿ ಅವರ ಸಿ.ಡಿ. ಬಿಡುಗಡೆ ಹಿಂದೆ ಕಾಂಗ್ರೆಸ್‌ ಕೈವಾಡವಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ವಾರಕ್ಕೊಮ್ಮೆ ವಯನಾಡಿಗೆ ಭೇಟಿ ನೀಡುವುದರ ಹಿಂದೆಯೂ ಲೈಂಗಿಕ ಅಭೀಪ್ಸೆಯೇ ಇದೆ’ ಎಂದು ಆರೋಪಿಸಿದರು.

‘ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿಲ್ಲ. ಆಕೆ ಪತಿ, ಮಕ್ಕಳು ಅಥವಾ ಮಾಜಿ ಸಚಿವರ ಪತ್ನಿ ದೂರು ಕೊಟ್ಟರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ. ಮಹಿಳೆಗೆ ಪ್ರಾಣಭಯವಿದ್ದರೆ ನನ್ನನ್ನು ಸಂಪರ್ಕಿಸಿದರೆ ನೆರವಾಗುವೆ’ ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು