ಶನಿವಾರ, ಜುಲೈ 31, 2021
28 °C

ಹಾಸಿಗೆ ಬ್ಲಾಕಿಂಗ್; ವಾರ್‌ ರೂಮ್‌ ನೌಕರ ಸೇರಿ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರ ಹೆಸರಿನಲ್ಲಿ ಹಾಸಿಗೆ ಬ್ಲಾಕ್ ಮಾಡಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ವಾರ್‌ ರೂಮ್ ನೌಕರ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಾರ್‌ ರೂಮ್ ನೌಕರ ವರುಣ್ ಹಾಗೂ ಆತನ ಸ್ನೇಹಿತ ಯಶವಂತ ಬಂಧಿತರು.

‘ಗುಣಮುಖವಾಗುತ್ತಿದ್ದ ಹಾಗೂ ಮೃತರಾಗುತ್ತಿದ್ದ ಕೊರೊನಾ ಸೋಂಕಿತರ ಹಾಸಿಗೆಗಳ ಬಗ್ಗೆ ವರುಣ್ ಮಾಹಿತಿ ಪಡೆಯುತ್ತಿದ್ದ. ಜೊತೆಗೆ, ಹಾಸಿಗೆ ಬೇಕೆಂದು ಹೇಳಿ ವಾರ್ ರೂಮ್‌ಗೆ ಕರೆ ಮಾಡುತ್ತಿದ್ದ ಸೋಂಕಿತರ ಮಾಹಿತಿಯನ್ನೂ ದಾಖಲಿಸಿಕೊಳ್ಳುತ್ತಿದ್ದ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಅದೇ ಮಾಹಿತಿಯನ್ನು ವರುಣ್, ಯಶವಂತ್‌ಗೆ ನೀಡುತ್ತಿದ್ದ. ಬಳಿಕ, ರೋಗಿಗಳನ್ನು ಸಂಪರ್ಕಿಸುತ್ತಿದ್ದ ಯಶವಂತ, ‘ವಾರ್ ರೂಮ್‌ನಿಂದ ನಿಮಗೆ ಹಾಸಿಗೆ ಸಿಗಲು ಹೆಚ್ಚಿನ ಸಮಯವಾಗುತ್ತದೆ. ಹಣ ಕೊಟ್ಟರೆ ಬೇಗನೆ ಹಾಸಿಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳುತ್ತಿದ್ದ.

ಜೀವ ಉಳಿದರೆ ಸಾಕು ಎಂಬ ಪರಿಸ್ಥಿತಿಯಲ್ಲಿದ್ದ ಸೋಂಕಿತರು ಹಾಗೂ ಅವರ ಸಂಬಂಧಿಕರು, ಆರೋಪಿ ಕೇಳಿದಷ್ಟು ಹಣವನ್ನು ಬ್ಯಾಂಕ್‌ ಖಾತೆಗೆ ಹಾಕುತ್ತಿದ್ದರು. ಹಣ ಬಂದ ನಂತರ ಆರೋಪಿಗಳು, ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ ಕೊಡಿಸುತ್ತಿದ್ದರು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು