ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 30 ಬಾಲವಿಜ್ಞಾನಿಗಳು ರಾಷ್ಟ್ರಮಟ್ಟಕ್ಕೆ

ಉಜಿರೆಯ ಎಸ್‌ಡಿಎಂ ಶಾಲೆಯ ಮಧುಶ್ರೀ ಅತ್ಯುತ್ತಮ ಬಾಲವಿಜ್ಞಾನಿ
Last Updated 20 ಜನವರಿ 2023, 12:29 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಹೊರವಲಯದ ಖಣದಾಳದ ಶ್ರೀಗುರುವಿದ್ಯಾಪೀಠ ವಸತಿ ಶಾಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್‌ ಈಚೆಗೆ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉಜಿರೆಯ ಎಸ್‌ಡಿಎಂ ಶಾಲೆಯ ವಿದ್ಯಾರ್ಥಿನಿ ಮಧುಶ್ರೀ ಸೇರಿ 30 ಬಾಲವಿಜ್ಞಾನಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದೇಶದ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವ ಹಾಗೂ ಅವರನ್ನು ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ 10 ರಿಂದ 17 ವಯೋಮಾನದ ನಗರ ಹಾಗೂ ಗ್ರಾಮೀಣ ಪ್ರದೇಶಗಳ 300 ವಿದ್ಯಾರ್ಥಿಗಳು ಯೋಜನೆ ಮಂಡಿಸಿದ್ದರು.

ಪರಿಸರ ವ್ಯವಸ್ಥೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಆಧಾರಿತ ಸಂಶೋಧನೆ ಕುರಿತು ಉಜಿರೆಯ ಎಸ್‌ಡಿಎಂ ಶಾಲೆಯ ವಿದ್ಯಾರ್ಥಿನಿ ಮಧುಶ್ರೀ ಅತ್ಯುತ್ತಮ ವರದಿ ಮಂಡಿಸಿದ ಬಾಲವಿಜ್ಞಾನಿಯಾಗಿ ಆಯ್ಕೆಯಾಗಿದ್ದು, ಈಕೆಗೆ 10 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಜನವರಿ 27ರಿಂದ ಗುಜರಾತಿನ ಅಹಮದಾಬಾದ್‌ನ ಸೈನ್ಸ್‌ ಸಿಟಿಯಲ್ಲಿ ಜರುಗುವ 30ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ 30 ಬಾಲವಿಜ್ಞಾನಿಗಳು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಗಿರೀಶ ಕಡ್ಲೇವಾಡ ತಿಳಿಸಿದ್ದಾರೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ 30 ಬಾಲವಿಜ್ಞಾನಿಗಳು:

ರಾಜಶೇಖರ (ಯಾದಗಿರಿ), ಅಶ್ವಿನಿ ಎನ್‌.ಬಿ (ಶಿವಮೊಗ್ಗ), ಶ್ವೇತಾ (ವಿಜಯಪುರ), ಸುರೇಶ ಕಾಜಗರ್‌ (ಬಾಗಲಕೋಟೆ), ಪವಿತ್ರಾ ಮುದ್ದೆಪ್ಪನವರ (ಧಾರವಾಡ), ಶಿವರಾಜ ಕೊಪ್ಪದ (ಗದಗ), ಲೇಖನ ಎಸ್‌.(ಬೆಂಗಳೂರು ನಗರ), ಚಂದನ ಎಸ್‌.ಎ (ಕಲಬುರಗಿ), ಅನಘ (ದಾವಣಗೆರೆ), ಹೃದ್ಧಾನ್‌ ಆರ್‌.ಜೈನ್‌ (ಶಿವಮೊಗ್ಗ), ಮನಿಶ್‌ ಎಸ್‌.(ಮೈಸೂರು), ದೃಶ್‌ (ದಕ್ಷಿಣ ಕನ್ನಡ), ಪವಿತ್ರಾ ಎಸ್‌.ಆರ್‌.(ಮಂಡ್ಯ), ಶ್ರೀನಿಧಿ (ಉಡುಪಿ), ಸಿಂಚನಾ ಬ್ಯಾಳಿ (ಬಾಗಲಕೋಟೆ), ಲಕ್ಷಿತಾ ಕೆ.(ಬೆಂಗಳೂರು ನಗರ), ಶ್ರೀಯಾ (ಉಡುಪಿ), ಭೀಮಾಗೌಡರ್‌ (ಬಾಗಲಕೋಟೆ), ಸ್ಫೂರ್ತಿ ಶತಿಬಾ (ಕಲಬುರಗಿ), ಸಾನಿಕಾ ಜೆ.ನಾಯ್ಕ್‌ (ಉತ್ತರ ಕನ್ನಡ), ಯಶಸ್ವಿನಿ ಎ.ಬರ್ಕೂರ್‌ (ಉಡುಪಿ), ಸಮಯ್‌ ಮಹಾಲೆ (ಉತ್ತರ ಕನ್ನಡ),ಅಕ್ಷತಾ ವಿ.ಎ(ಗದಗ), ಅನಘ ಎಚ್‌.ಪಿ.(ಮೈಸೂರು), ಸಾನ್ವಿ ಎಸ್‌.ಪಿ (ದಕ್ಷಿಣ ಕನ್ನಡ), ಆತೀಶ್‌ ರಜತ್‌ (ಬೆಂಗಳೂರು ನಗರ) ಸೌಬಿಯಾ ತೆಹ್ರೀಮ್‌ (ಶಿವಮೊಗ್ಗ), ಸುಸೃತ ಟಿ.ಎಸ್‌.(ಚಿತ್ರದುರ್ಗ), ಆದಿತಿ ಎಸ್‌.ಕೆ.(ಬೆಳಗಾವಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT