ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಪರೀಕ್ಷೆ: 54,342 ಮಂದಿ ಅರ್ಹ

Last Updated 17 ಆಗಸ್ಟ್ 2022, 21:28 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ (6ರಿಂದ 8ನೇ ತರಗತಿ) 15 ಸಾವಿರ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, 54,342 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ನೇಮಕಾತಿ ಬಯಸಿ 1,16,223 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 74,923 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 20,581 ಅಭ್ಯರ್ಥಿಗಳು ಅರ್ಹತೆ ಪಡೆದಿಲ್ಲ.

ಖಾಲಿ ಹುದ್ದೆಗಿಂತಲೂ ಕಡಿಮೆ ಅಭ್ಯರ್ಥಿಗಳು: ಉರ್ದು, ಮರಾಠಿ, ತೆಲುಗು ಭಾಷಾ ಶಾಲೆಗಳಲ್ಲಿ ಖಾಲಿದ್ದ ಶಿಕ್ಷಕರ ಹುದ್ದೆಗಳಿಗೂ ಪರೀಕ್ಷೆ ನಡೆಸ ಲಾಗಿತ್ತು. ಆದರೆ, ಖಾಲಿ ಹುದ್ದೆಗೂ ಕಡಿಮೆ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಗಣಿತ–ವಿಜ್ಞಾನದಲ್ಲಿ 74 ಹುದ್ದೆಗಳಿಗೆ 50 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಉರ್ದು ಶಾಲೆಗಳ ಗಣಿತ–ವಿಜ್ಞಾನದಲ್ಲಿ 411 ಹುದ್ದೆಗಳು ಖಾಲಿ ಇದ್ದರೆ 286 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಪರೀಕ್ಷಾ ಫಲಿತಾಂಶವನ್ನು ಇಲಾಖೆಯ ವೆಬ್‌ಸೈಟ್‌https://www.schooleducation.kar.nic.in ವೀಕ್ಷಿಸಬಹುದು.

ಸಹಾಯಕ ಪ್ರಾಧ್ಯಾಪಕರ ಪಟ್ಟಿ ಇಂದು ಪ್ರಕಟ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ 1,242 ಹದ್ದೆಗಳ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಆ.18ರ ಸಂಜೆ 4ಕ್ಕೆ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT