ಭಾನುವಾರ, ಮಾರ್ಚ್ 26, 2023
23 °C

ಇಸ್ರೊ ಜತೆ 60 ನವೋದ್ಯಮಗಳ ನೋಂದಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸಿದ ಬಳಿಕ ಸುಮಾರು 60 ನವೋದ್ಯಮಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಜತೆ ಒಪ್ಪಂದ ನೋಂದಾಯಿಸಿಕೊಂಡಿವೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದರು.

‘ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯವನ್ನು ಸಹ ತೊಡಗಿಸಿಕೊಳ್ಳಲಾಯಿತು. ಇಸ್ರೊದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಮೂಲಕ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಹಲವು ಕಂಪನಿಗಳು ಆಸಕ್ತಿ ವಹಿಸಿವೆ. ಕೆಲವು ಕಂಪನಿಗಳು ಬಾಹ್ಯಾಕಾಶದಲ್ಲಿ ತ್ಯಾಜ್ಯಗಳ ನಿರ್ವಹಣೆಯಲ್ಲೂ ತೊಡಗಿವೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ದಿಗಂತರ ನವೋದ್ಯಮವು ಬಾಹ್ಯಾಕಾಶ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿದೆ. ಜತೆಗೆ, ವಿವಿಧ ಕಂಪನಿಗಳು ನ್ಯಾನೊ ಉಪಗ್ರಹಗಳು, ಉಡಾವಣೆ ವಾಹಕಗಳು, ಸಂಶೋಧನೆ ವಲಯ ಕ್ಷೇತ್ರಗಳಲ್ಲೂ ನವೋದ್ಯಮಗಳು ತೊಡಗಿಸಿಕೊಂಡಿವೆ’ ಎಂದು ವಿವರಿಸಿದರು.

‘ಉಪಗ್ರಹಗಳ ಉಡಾವಣೆಯಿಂದಾಗಿ ಬಾಹ್ಯಾಕಾಶದಲ್ಲಿ ಈಗ ದಟ್ಟಣೆ ಹೆಚ್ಚಾಗುತ್ತಿವೆ. ನಮಗೆ ಸುಸ್ಥಿರ ಬಾಹ್ಯಾಕಾಶ ಕ್ಷೇತ್ರ ಅಗತ್ಯವಿದೆ. ಹೀಗಾಗಿ, ಬಾಹ್ಯಾಕಾಶದಲ್ಲಿ ತ್ಯಾಜ್ಯ ಮತ್ತು ದಟ್ಟಣೆಯಾಗುವುದನ್ನು ತಪ್ಪಿಸಬೇಕಾಗಿದೆ. ತ್ಯಾಜ್ಯಗಳಿಂದ ಉಪಗ್ರಹಗಳಿಗೆ ಹಾನಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆರಂಭಿಸಿರುವ ಐಎಸ್‌4ಒಎಂ ಮಹತ್ವದ ಹೆಜ್ಜೆಯಾಗಿದೆ’ ಎಂದರು. ‘ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಯಿಂದಾಗಿ ಭಾರತ 2047ರಲ್ಲಿ ಅತ್ಯಮೂಲ್ಯ ಸಾಧನೆ ಮಾಡಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರಲಿದೆ’ ಎಂದು ಆಶಯ ವ್ಯಕ್ತಪಡಿಸಿದರು.

‘ಮಹಿಳಾ ರೋಬೊ’: ‘ಗಗನಯಾನ ಯೋಜನೆಯಲ್ಲಿ ಮಹಿಳಾ ರೋಬೊ ಕಳುಹಿಸಲು ನಿರ್ಧರಿಸಲಾಗಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.

‘ಕೋವಿಡ್‌ ಕಾರಣಕ್ಕೆ ಗಗನಯಾನ ಯೋಜನೆ ವಿಳಂಬವಾಗಿದ್ದು, ಮುಂದಿನ ವರ್ಷ ಖಚಿತವಾಗಿ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು