ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಿಯಿಂದ 61 ಲಕ್ಷ ಮತದಾರರು ಹೊರಕ್ಕೆ -ಎಐಸಿಸಿ ವಕ್ತಾರೆ ಐಶ್ವರ್ಯಾ ಆರೋಪ

ಎಐಸಿಸಿ ವಕ್ತಾರೆ ಐಶ್ವರ್ಯಾ ಮಹದೇವ್‌ ಗಂಭೀರ ಆರೋಪ
Last Updated 28 ಡಿಸೆಂಬರ್ 2022, 4:38 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 2018ರಿಂದ ಈವರೆಗೆ 86 ಲಕ್ಷ ಮತದಾರರ ಸೇರ್ಪಡೆ ಮಾಡಲಾಗಿದೆ. 61 ಲಕ್ಷ ಮತದಾರರನ್ನು ಡಿಲೀಟ್‌ ಮಾಡಲಾಗಿದೆ. ತಮಗೆ ಅನುಕೂಲಕ್ಕೆ ತಕ್ಕಂತೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದಾರೆ’ ಎಂದುಎಐಸಿಸಿ ವಕ್ತಾರೆ ಐಶ್ವರ್ಯಾ ಮಹದೇವ್‌ ಆರೋಪಿಸಿದರು.

ನಗರ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ನಡೆದ ಚಾಮರಾಜ ವಿಧಾನಸಭಾ ಕ್ಷೇತ್ರದ ಬೂತ್‌ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂಜಾಗ್ರತೆ ವಹಿಸಿದ್ದರೆ ಮತದಾರರ ಪಟ್ಟಿಯಲ್ಲಿ ಆಗಿರುವ ವ್ಯತ್ಯಾಸ ತಡೆಹಿಡಿಯಹುದಾಗಿತ್ತು ಎಂದರು.

‘ಬೆಂಗಳೂರಿನಲ್ಲಿ ಚಿಲುಮೆ ಎಂಬ ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕೊಟ್ಟರು. ಅವರು ಮನೆ ಮನೆಗೆ ಹೋಗಿ ಬಿಎಲ್‌ಎ ಎಂದು ಹೇಳಿಕೊಂಡು ಜಾತಿ, ಜನಾಂಗವಾರು, ಹಿಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಿದ್ದರು ಎಂಬ ಮಾಹಿತಿ ಕಲೆ ಹಾಕಿದರು. ಈ ಬಗ್ಗೆ ಪಕ್ಷ ಹೋರಾಟ ನಡೆಸಿದ ಬಳಿಕ ತನಿಖೆಗೆ ಆದೇಶ ನೀಡಿತ್ತು’ ಎಂದು ತಿಳಿಸಿದರು.

‘ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಡಿ.23ಕ್ಕೆ ಮುಗಿದಿದೆ. ಜನವರಿ 2ನೇ ವಾರದಲ್ಲಿ ಅಂತಿಮ ಮತದಾರರ ಪಟ್ಟಿ ಬರುತ್ತದೆ. ಆಗ ಬಿಎಲ್‌ಒಗಳು ಎಚ್ಚರಿಕೆಯಿಂದ ಪರಿಶೀಲನೆ ನಡೆಸಬೇಕು’ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ವಾಸು ಮಾತನಾಡಿ, ‘ನಗರ ಪ್ರದೇಶದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬಹುದು. ಗ್ರಾಮಾಂತರ ಪ್ರದೇಶದಲ್ಲಿ ಸೇರ್ಪಡೆ ಕಷ್ಟ. ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಂದ ನಗರ ಪ್ರದೇಶಕ್ಕೆ ಬಂದವರನ್ನು ಸೇರ್ಪಡೆ ಮಾಡುತ್ತಾರೆ’ ಎಂದರು.

ಕಾಂಗ್ರೆಸ್‌ ಮತದಾರರು ಇರುವ ಕಡೆ ಹೆಚ್ಚು ಡಿಲೀಟ್‌ ಮಾಡಲಾಗಿದೆ. ತಮ್ಮ ಕ್ಷೇತ್ರದಲ್ಲಿ 39,169 ಸಾವಿರ ಮತದಾರರನ್ನು ಸೇರಿಸಿದ್ದಾರೆ. 16,247 ಮತದಾರರು ಡಿಲೀಟ್‌ ಮಾಡಿದ್ದಾರೆ. ಈ ಬಗ್ಗೆ ಬಿಎಲ್‌ಒಗಳಿಗೆ ಎಚ್ಚರಿಕೆಯಿಂದ ಪರಿಶೀಲನೆ ಮಾಡಬೇಕು ಎಂದು ಸಲಹೆ ನೀಡಿದರು.

ನಗರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಈಶ್ವರ್‌ ಚಕ್ಕಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ಹರೀಶಗೌಡ, ಶಿವಣ್ಣ, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ರಾಜೇಶ್ವರಿ, ಪುಷ್ಪಾವತಿ, ಉಷಾ ಕುಮಾರ್‌, ಮಂಜುಳಾ ಮಾನಸ, ಲೋಕೇಶ್‌, ರಮೇಶ್‌, ಅನಂತ್‌, ಸಿದ್ದಪ್ಪ, ಶೌಕತ್‌ ಪಾಷ, ರವಿಶಂಕರ್‌, ರಘು, ನಾಗಭೂಷಣ್‌‍, ಪ್ರಶಾಂತ್‌ ಗೌಡ, ಸುಂದರ್‌ ಕುಮಾರ್‌, ಪುಷ್ಪವಲ್ಲಿ, ಹೇಮಾವತಿ, ಸುಶೀಲಾ ಮರೀಗೌಡ, ರೋಹಿತ್‌, ಶಿವಮಾದು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT