ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮ ಮನೆಗೆ ನೀರು ನುಗ್ಗಿದೆ ಎಂದು ಅಧಿಕಾರಿಗಳ ಮೊರೆ ಹೋದ ಜಗ್ಗೇಶ್‌ಗೆ ಎಎಪಿ ಚಾಟಿ

Last Updated 30 ಆಗಸ್ಟ್ 2022, 8:31 IST
ಅಕ್ಷರ ಗಾತ್ರ

ಬೆಂಗಳೂರು:ಡಬಲ್ ಎಂಜಿನ್ ಸರ್ಕಾರ ಈಗ ಎಂಜಿನ್‌ ಕೆಟ್ಟು ನಿಂತಿದೆ. ಏನು ಮಾಡುವುದು ಎಂದುಬಿಜೆಪಿಯ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್‌ಅವರನ್ನು ಆಮ್‌ ಆದ್ಮಿ ಪಕ್ಷ (ಎಎಪಿ) ಪ್ರಶ್ನಿಸಿದೆ.

ತುಮಕೂರು ಜಿಲ್ಲೆಯ ಮಾಯಸಂದ್ರದಲ್ಲಿರುವ ತಮ್ಮ ಮನೆಗೆ ನೀರು ನುಗ್ಗಿರುವ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಜಗ್ಗೇಶ್‌ ಅವರು, ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಕೆಲವು ನೆಟ್ಟಿಗರು, ಡಬಲ್‌ ಎಂಜಿನ್‌ (ಕೇಂದ್ರ ಹಾಗೂ ರಾಜ್ಯದಲ್ಲಿ)ಸರ್ಕಾರವಿದೆ. ನೀವು ರಾಜ್ಯಸಭಾ ಸದಸ್ಯರಾಗಿದ್ದೀರಿ. ನಿಮ್ಮಂತಹವರಿಗೇ ಅಂಗಲಾಚುವ ಸ್ಥಿತಿ ಇದೆ ಎಂದರೆ ಬಡವರ ಪಾಡು ಹೇಗಿರಬೇಕು ಊಹಿಸಿ ಎಂದು ಚಾಟಿ ಬೀಸಿದ್ದರು.

ಈ ಬೆಳವಣಿಗೆಗಳನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ 'ಎಎಪಿ ಕರ್ನಾಟಕ', ಡಬಲ್ ಎಂಜಿನ್ ಸರ್ಕಾರ ಈಗ ಎಂಜಿನ್‌ ಕೆಟ್ಟು ನಿಂತಿದೆ. ಏನು ಮಾಡುವುದು ಜಗ್ಗೇಶ್‌? ಎಲ್ಲೆಲ್ಲೂ ನಾವೇ, ಎಲ್ಲೆಲ್ಲೂ ನಾವೆ ಎಂದು ಅಸಂವಿಧಾನಿಕವಾಗಿ ಬಿಜೆಪಿ ಸರ್ಕಾರಗಳನ್ನು ರಚಿಸುವ ನೀವು, ಎಲ್ಲಾ ಕಡೆ ಇದ್ದು ಏನು ಮಾಡುತ್ತಿದ್ದೀರಿ ಎಂದು ಕೇಳಿದೆ.

ಹಾಗೆಯೇ, 'ಕೇಂದ್ರ, ರಾಜ್ಯ, ತುಮಕೂರು, ತುರುವೇಕೆರೆ ಎಲ್ಲೆಡೆ ಬಿಜೆಪಿ ಯವರೇ ಆಡಳಿತ ಮಾಡುತ್ತಿದ್ದಾರೆ. ಕೆಲಸ ಮಾತ್ರ ಶೂನ್ಯ' ಎಂದು ಕುಟುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT