ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ: ಸ್ನಾನಗೃಹದಲ್ಲಿ ₹5ಲಕ್ಷ, ಎಇ ಮನೆಯಲ್ಲಿ ₹10ಲಕ್ಷ ಮೌಲ್ಯದ ವಜ್ರಾಭರಣ ಪತ್ತೆ

ಅಧಿಕಾರಿಗಳ ಬಳಿ ಪತ್ತೆಯಾಗಿರುವ ಆಸ್ತಿ ವಿವರ
Last Updated 17 ಜೂನ್ 2022, 20:00 IST
ಅಕ್ಷರ ಗಾತ್ರ

ಎಇ ಮನೆಯಲ್ಲಿ ₹10 ಲಕ್ಷ ಮೌಲ್ಯದ ವಜ್ರಾಭರಣ ಪತ್ತೆ

ಹೊಸಪೇಟೆ (ವಿಜಯನಗರ): ಜಿಲ್ಲೆಯ ಹೂವಿನಹಡಗಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿರುವ ವಿ. ಪರಮೇಶ್ವರಪ್ಪ ಅವರ ಮನೆ, ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದವರು (ಎಸಿಬಿ) ಶುಕ್ರವಾರ ದಾಳಿ ನಡೆಸಿದ್ದು, ₹10 ಲಕ್ಷ ಮೌಲ್ಯದ ವಜ್ರಾಭರಣ
ಪತ್ತೆ ಹಚ್ಚಿದ್ದಾರೆ.

ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ತಂಡ, 892 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ಆಭರಣ ₹10.33 ಲಕ್ಷ ನಗದು, 2 ಮನೆ, 7 ನಿವೇಶನ 4.72 ಸೇಂಟ್ಸ್‌ ಕೃಷಿ ಭೂಮಿ, ಕೋಟಕ್‌ ಬ್ಯಾಂಕ್‌ನಲ್ಲಿ ಲಾಕರ್‌ ಇರುವುದು ಪತ್ತೆ ಹಚ್ಚಿದೆ.

ಸ್ನಾನಗೃಹದಲ್ಲಿ ₹5 ಲಕ್ಷ ನಗದು ಪತ್ತೆ
ಬೆಳಗಾವಿ: ಇಲ್ಲಿನ ಪಿಡಬ್ಲ್ಯುಡಿ ಸೂಪರಿಂಟೆಂಡೆಂಟ್‌ ಎಂಜಿನಿಯರ್ ಬಿ.ವೈ. ಪವಾರ್‌ ಅವರ ಕಚೇರಿ, ಸರ್ಕಾರಿ ಹಾಗೂ ಖಾಸಗಿ ನಿವಾಸಗಳು ಹಾಗೂ ಅವರ ಒಡೆತನದ ಕಾರ್ಖಾನೆ ಮೇಲೆ ಶುಕ್ರವಾರ ಎಸಿಬಿ ತಂಡ ದಾಳಿ ನಡೆಸಿದೆ.

ಈ ವೇಳೆ ಸರ್ಕಾರಿ ನಿವಾಸದ ಸ್ನಾನಗೃಹದಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಇಟ್ಟಿದ್ದ ₹5 ಲಕ್ಷ ನಗದು, ಕಪಾಟಿನಲ್ಲಿದ್ದ 310 ಗ್ರಾಂ ಚಿನ್ನಾಭರಣ, ಒಂದು ಐಷಾರಾಮಿ ಕಾರು ಸೇರಿ ಮೂರು ಕಾರುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು.

ನಿಪ್ಪಾಣಿ ನಗರದ ಅವರ ಸ್ವಂತ ಮನೆ, ಪತ್ನಿಯ ಮನೆ, ಬೋರಗಾಂವ್‌ನಲ್ಲಿರುವ ಜವಳಿ ಕಾರ್ಖಾನೆ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದು,ಕೆಲವು ಆಸ್ತಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಎಸಿಬಿ ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಸಹಕರಿಸಿದ್ದೇನೆ. ಏನೂ ಪ್ರತಿಕ್ರಿಯೆ ಕೊಡುವುದಿಲ್ಲ’ ಎಂದು ಪವಾರ್‌ ಅವರು ಮಾಧ್ಯಮಗಳ ಮುಂದೆ ಹೇಳಿದರು. ಇದೇ ಜೂನ್‌ 30ಕ್ಕೆ ಅವರು ನಿವೃತ್ತಿಹೊಂದಲಿದ್ದಾರೆ.

ಎಸಿಬಿ ದಾಳಿ:ಅಧಿಕಾರಿಗಳ ಬಳಿ ಪತ್ತೆಯಾಗಿರುವ ಆಸ್ತಿ ವಿವರ

ಬೆಂಗಳೂರು: ರಾಜ್ಯದ ವಿವಿಧೆಡೆ 21ವ ಸರ್ಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಶುಕ್ರವಾರ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ತನಿಖಾ ತಂಡ ಪತ್ತೆಮಾಡಿರುವ ಆಸ್ತಿಗಳ ವಿವರ ಈ ಕೆಳಗಿನಂತಿದೆ.

*ಶ್ರೀಧರ್‌ ಬಿ.ಎಸ್‌., ಉತ್ತರ ಕನ್ನಡ ಜಿಲ್ಲಾ ನೋಂದಣಾಧಿಕಾರಿ – ಬೆಂಗಳೂರಿನಲ್ಲಿ 2 ಮನೆ, 1 ನಿವೇಶನ, ಕನಕಪುರದಲ್ಲಿ ಫಾರ್ಮ್‌ ಹೌಸ್‌, 2 ಎಕರೆ ಕೃಷಿ ಜಮೀನು, ತಲಾ 2 ಕಾರು ಮತ್ತು ಬೈಕ್‌, ಬ್ಯಾಂಕ್‌ ಖಾತೆಗಳಲ್ಲಿ ₹ 24 ಲಕ್ಷ.

*ಎ. ಮೋಹನ್‌ ಕುಮಾರ್‌, ಸಣ್ಣ ನೀರಾವರಿ ಇಲಾಖೆಯ ಚಿಕ್ಕಬಳ್ಳಾಪುರ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌– ಬೆಂಗಳೂರಿನಲ್ಲಿ 1 ಮನೆ, 7 ನಿವೇಶನ, 2 ವಾಣಿಜ್ಯ ಸಂಕೀರ್ಣ, 2.27 ಕೆ.ಜಿ. ಚಿನ್ನ, 6.6 ಕೆ.ಜಿ. ಬೆಳ್ಳಿ, ಕೆಂಗೇರಿಯಲ್ಲಿ 1 ಎಕರೆ 13 ಗುಂಟೆ ಜಮೀನು, ತಲಾ 2 ಕಾರು ಮತ್ತು ಬೈಕ್‌.

*ತಿಪ್ಪಣ್ಣ ಪಿ. ಸಿರಸಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಬೀದರ್‌ ಜಿಲ್ಲಾ ಯೋಜನಾಧಿಕಾರಿ – ಕಲಬುರಗಿಯಲ್ಲಿ 3 ಮನೆ, 4 ಎಕರೆ 19 ಗುಂಟೆ ಕೃಷಿ ಜಮೀನು, 2 ಕಾರು ಮತ್ತು 1 ಬೈಕ್‌.

*ಮೃತ್ಯುಂಜಯ ಸಿ. ತಿರಾಣಿ, ಬೀದರ್‌ ಪಶುವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಹಣಕಾಸು ನಿಯಂತ್ರಕ – ಕಲಬುರಗಿಯಲ್ಲಿ 1 ಮನೆ, ಬೀದರ್‌ನಲ್ಲಿ 1 ಮನೆ, 6 ನಿವೇಶನ, 10 ಎಕರೆ 35 ಗುಂಟೆ ಕೃಷಿ ಜಮೀನು, 717 ಗ್ರಾಂ. ಚಿನ್ನ, ಬ್ಯಾಂಕ್‌ ಖಾತೆಗಳಲ್ಲಿ ₹ 76.50 ಲಕ್ಷ,

*ಉದಯ ರವಿ, ಕೊಪ್ಪಳದ ಪೊಲೀಸ್‌ ಇನ್‌ಸ್ಪೆಕ್ಟರ್‌ – ಕೊಪ್ಪಳ ಜಿಲ್ಲೆಯ ಮುದ್ಗಲ್‌ನಲ್ಲಿ 2 ನಿವೇಶನ, ವಿವಿಧೇ 79 ಎಕರೆ.23 ಗುಂಟೆ ಕೃಷಿ ಜಮೀನು, 1.036 ಕೆ.ಜಿ. ಚಿನ್ನ, 1.090 ಕೆ.ಜಿ. ಬೆಳ್ಳಿ, 1 ಟ್ರ್ಯಾಕ್ಟರ್‌.

*ಪರಮೇಶ್ವರಪ್ಪ, ಸಣ್ಣ ನೀರಾವರಿ ಇಲಾಖೆಯ ಹೂವಿನಹಡಗಲಿ ಉಪ ವಿಭಾಗದ ಸಹಾಯಕ ಎಂಜಿನಿಯರ್‌– ಚಿತ್ರದುರ್ಗ ಜಿಲ್ಲೆಯ ಮೇದೆಹಳ್ಳಿಯಲ್ಲಿ 1 ಮನೆ, ಕೂಡ್ಲಿಗಿಯಲ್ಲಿ 1 ಮನೆ, ವಿವಿಧೆಡೆ 7 ನಿವೇಶನ, 4 ಎಕರೆ 72 ಸೆಂಟ್ಸ್ ಕೃಷಿ ಜಮೀನು, 892 ಗ್ರಾಂ. ಚಿನ್ನ, 2.68ನ ಕೆ.ಜಿ. ಬೆಳ್ಳಿ, 1 ಕಾರು, 1 ಬೈಕ್‌, 10.33 ಲಕ್ಷ ನಗದು.

*ಮಂಜುನಾಥ ಜಿ., ಲೋಕೋಪಯೋಗಿ ಇಲಾಖೆಯ ನಿವೃತ್ತ ಸೂಪರಿಂಟೆಂಡಿಂಗ್‌ ಎಂಜಿನಿಯರ್‌– ಬೆಂಗಳೂರಿನಲ್ಲಿ ಎರಡು ಮನೆ, ಎರಡು ವಾಣಿಜ್ಯ ಸಂಕೀರ್ಣ, ಎರಡು ಫ್ಲ್ಯಾಟ್‌, ಬೆಂಗಳೂರು ದಕ್ಷಿಣ ತಾಲ್ಲೂಕು ಚಿಂಚನಘಟ್ಟದಲ್ಲಿ 4 ಎಕರೆ ಕೃಷಿ ಜಮೀನು, 1 ಬೈಕ್‌, 2 ಕಾರು, 3.75 ಕೆ.ಜಿ. ಬೆಳ್ಳಿ.

*ಡಾ.ಕೆ. ಜನಾರ್ದನ್‌, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ನಿವೃತ್ತ ಕುಲಸಚಿವ – ಬೆಂಗಳೂರಿನಲ್ಲಿ 1 ಮನೆ, 2 ನಿವೇಶನ, 3 ಫ್ಲ್ಯಾಟ್‌, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಒಂದು ಶಾಲೆ, 7 ಎಕರೆ 30 ಗುಂಟೆ ಕೃಷಿ ಜಮೀನು, ನಾಲ್ಕು ಕಾರು, ಮೂರು ಬೈಕ್‌.

*ಶಿವಲಿಂಗಯ್ಯ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉದ್ಯಾನ ಸಿಬ್ಬಂದಿ – ಬೆಂಗಳೂರು ನಗರದಲ್ಲಿ 4 ಮನೆ, 1 ನಿವೇಶನ, 510 ಗ್ರಾಂ. ಚಿನ್ನ, ಚನ್ನಪಟ್ಟಣ ತಾಲ್ಲೂಕಿನಲ್ಲಿ 1 ಎಕರೆ 9 ಗುಂಟೆ ಕೃಷಿ ಜಮೀನು, 2 ಬೈಕ್‌, ಮೂರು ಕಾರು.

*ಮಧುಸೂದನ್‌, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಹಾಯಕ ಮಹಾನಿರೀಕ್ಷಕ – ಬೆಂಗಳೂರು ನಗರದಲ್ಲಿ ಎರಡು ಮನೆ, 1 ನಿವೇಶನ, 2.29 ಕೆ.ಜಿ. ಚಿನ್ನ, 4.99 ಕೆ.ಜಿ. ಬೆಳ್ಳಿ, ಮಂಡ್ಯ ಜಿಲ್ಲೆಯಲ್ಲಿ 13 ಎಕರೆ 5 ಗುಂಟೆ ಕೃಷಿ ಜಮೀನು, 2 ಕಾರು, 1 ಬೈಕ್‌.

*ಎಚ್‌.ಈ. ರಾಮಕೃಷ್ಣ, ಸಣ್ಣ ನೀರಾವರಿ ಇಲಾಖೆಯ ಹಾಸನ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ – ಹಾಸನ ನಗರದಲ್ಲಿ 1 ಮನೆ, ವಿವಿಧೆಡೆ ಮೂರು ನಿವೇಶನ, 26 ಗುಂಟೆ ಕೃಷಿ ಜಮೀನು, ಬ್ಯಾಂಕ್‌ ಖಾತೆಗಳಲ್ಲಿ ₹ 37 ಲಕ್ಷ.

*ಓಬಯ್ಯ, ಕೊಡಗು ಜಿಲ್ಲಾ ಪಂಚಾಯಿತಿಯ ವಿರಾಜಪೇಟೆ ಉಪ ವಿಭಾಗದ ಸಹಾಯಕ ಎಂಜಿನಿಯರ್‌– ಹುಣಸೂರು ತಾಲ್ಲೂಕಿನಲ್ಲಿ ಮೂರು ಮನೆ, 9 ಎಕರೆ 14 ಗುಂಟೆ ಕೃಷಿ ಜಮೀನು, 342 ಗ್ರಾಂ. ಚಿನ್ನ, 2.8 ಕೆ.ಜಿ. ಬೆಳ್ಳಿ.

*ಡಿ. ಸಿದ್ದಪ್ಪ, ವಿದ್ಯುತ್‌ ಪರಿವೀಕ್ಷಣಾ ಇಲಾಖೆಯ ಶಿವಮೊಗ್ಗದ ಉಪ ಮುಖ್ಯ ವಿದ್ಯುತ್‌ ಇನ್‌ಸ್ಪೆಕ್ಟರ್‌ – ಶಿವಮೊಗ್ಗ ಮತ್ತು ಹೊನ್ನಾಳಿಯಲ್ಲಿ ತಲಾ ಒಂದು ಮನೆ, ಶಿವಮೊಗ್ಗ ಮತ್ತು ದಾವಣೆಗೆರೆ ನಗರ
ಗಳಲ್ಲಿ 7 ನಿವೇಶನ, ದಾವಣಗೆರೆ ಜಿಲ್ಲೆಯಲ್ಲಿ 11 ಎಕರೆ 5 ಗುಂಟೆ ಕೃಷಿ ಜಮೀನು, 730 ಗ್ರಾಂ. ಚಿನ್ನ, 3.4 ಕೆ.ಜಿ. ಬೆಳ್ಳಿ, ₹ 7.85 ಲಕ್ಷ ನಗದು.

*ಚಂದ್ರಪ್ಪ ಸಿ. ಓಲೇಕರ್‌, ತುಂಗಾ ಮೇಲ್ದಂಡೆ ಯೋಜನೆಯ ರಾಣೆಬೆನ್ನೂರು ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌– ರಾಣೆಬೆನ್ನೂರಿನಲ್ಲಿ 1 ಮನೆ, 1 ನಿವೇಶನ, ಬ್ಯಾಡಗಿ ತಾಲ್ಲೂಕಿನಲ್ಲಿ 5 ನಿವೇಶನ, ಮೈದೂರು ಗ್ರಾಮದಲ್ಲಿ 25 ಎಕರೆ 22 ಗುಂಟೆ ಕೃಷಿ ಜಮೀನು, ನಾಲ್ಕು ಬೈಕ್‌, 1 ಕಾರು, 1 ಟ್ರ್ಯಾಕ್ಟರ್‌, ₹ 13.39 ಲಕ್ಷ ನಗದು, 1 ಕೋಳಿ ಸಾಕಣೆ ಫಾರ್ಮ್‌.

*ಭೀಮರಾವ್‌ ಯಶವಂತ ಪವಾರ,ಲೋಕೋಪಯೋಗಿ ಇಲಾಖೆಯ ಬೆಳಗಾವಿ ವೃತ್ತದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ – ಬೆಳಗಾವಿ ನಗರದಲ್ಲಿ 1 ಮನೆ, ಎರಡು ನಿವೇಶನ, ನಿಪ್ಪಾಣಿಯಲ್ಲಿ ನಿರ್ಮಾಣ ಹಂತದ ಪೆಟ್ರೋಲ್‌ ಬಂಕ್‌, ಬೋರಗಾಂವದಲ್ಲಿ 2 ವಾಣಿಜ್ಯ ಸಂಕೀರ್ಣ, ವಿವಿಧೇಡೆ 22 ಎಕರೆ 12 ಗುಂಟೆ ಕೃಷಿ ಜಮೀನು, 3 ಬೈಕ್‌, ಎರಡು ಕಾರು.

*ಪ್ರದೀಪ ಶಿವಪ್ಪ ಆಲೂರ,ಗದಗ ತಾಲ್ಲೂಕು ಅಸುಂಡಿ ಗ್ರಾಮ ಪಂಚಾಯಿತಿ ಗ್ರೇಡ್‌–2 ಕಾರ್ಯದರ್ಶಿ– ಗದಗ ಜಿಲ್ಲೆಯ ಹುಲಕೋಟಿ ಸೇರಿದಂತೆ ವಿವಿಧೆಡೆ ನಾಲ್ಕು ಮನೆ, ಆಸ್ಪತ್ರೆ, ಗದಗ ಮತ್ತು ಧಾರವಾಡದಲ್ಲಿ 7 ನಿವೇಶನ, 39 ಎಕಿರೆ 39 ಗುಂಟೆ ಕೃಷಿ ಜಮೀನು, 3 ಬೈಕ್‌, 2 ಕಾರು, 2 ಟ್ರ್ಯಾಕ್ಟರ್‌.

*ಶಂಕರಲಿಂಗ ನಾಗಪ್ಪ ಗೋಗಿ, ಬಾಗಲಕೋಟೆ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ – ಬಾಗಲಕೋಟೆಯಲ್ಲಿ 1 ಮನೆ, ಕೊಪ್ಪಳ ಮತ್ತು ಧಾರವಾಡದಲ್ಲಿ 2 ನಿವೇಶನ, ಇಳಕಲ್‌ನಲ್ಲಿ 2 ವಾಣಿಜ್ಯ ಸಂಕೀರ್ಣ, 2 ಬೈಕ್‌, 1 ಕಾರು.

*ಯಲ್ಲಪ್ಪ ಪಡಸಾಲಿ, ಬಾಗಲಕೋಟೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ–ಧಾರವಾಡದಲ್ಲಿ 2, ಕೊಪ್ಪಳದಲ್ಲಿ 1 ಮನೆ, 1 ಖಾಲಿನ ನಿವೇಶನ, ಧಾರವಾಡ ಜಿಲ್ಲೆಯಲ್ಲಿ 3 ವಾಣಿಜ್ಯ ಸಂಕೀರ್ಣ, ಬೆಂಗಳೂರಿನಲ್ಲಿ 1 ಫ್ಲ್ಯಾಟ್‌, ಕೊಪ್ಪಳ ಜಿಲ್ಲೆಯಲ್ಲಿ 11 ಎಕರೆ 35 ಗುಂಟೆ ಕೃಷಿ ಜಮೀನು, ಮೂರು ಕಾರು, 2 ಬೈಕ್‌.

*ರಾಜೀವ್‌ ಪಿ. ನಾಯಕ್‌, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಉಪ ವಿಭಾಗದ ಪ್ರಧಾನ ಮಂತ್ರಿ
ಗ್ರಾಮ ಸಡಕ್‌ ಯೋಜನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ –‌ ಕಾರವಾರದಲ್ಲಿ 1 ಫ್ಲ್ಯಾಟ್‌, ಕಾರವಾರ ಮತ್ತು ಬೆಂಗಳೂರಿನಲ್ಲಿ ತಲಾ 1 ನಿವೇಶನ, ಬೆಂಗಳೂರಿನಲ್ಲಿ 1 ಫ್ಲ್ಯಾಟ್‌, ಶಿರಸಿಯಲ್ಲಿ 4 ಗುಂಟೆ ಕೃಷಿ ಜಮೀನು, 2 ಕಾರು, 2 ಬೈಕ್‌.

*ಹರೀಶ್‌, ಸಣ್ಣ ನೀರಾವರಿ ಇಲಾಖೆಯ ಉಡುಪಿ ವಿಭಾಗದ ಸಹಾಯಕ ಎಂಜಿನಿಯರ್‌ – ಉಡುಪಿಯಲ್ಲಿ 1 ಮನೆ, ಹಾವಂಜೆಯಲ್ಲಿ 2 ನಿವೇಶನ, 3 ಎಕರೆ ಕೃಷಿ ಜಮೀನು, 970 ಗ್ರಾಂ. ಚಿನ್ನ, 2 ಕಾರು, 2 ಬೈಕ್‌, 4.03 ಲಕ್ಷ ನಗದು.

*ಬಿ.ಜಿ. ತಿಮ್ಮಯ್ಯ, ಅಜ್ಜಂಪುರ ಪಟ್ಟಣ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕ– ಕಡೂರು ತಾಲ್ಲೂಕಿನಲ್ಲಿ 2 ಮನೆ, ವಿವಿಧೆಡೆ 3 ನಿವೇಶನ, 21 ಎಕರೆ ಕೃಷಿ ಜಮೀನು, 1 ಕುರಿ ಸಾಕಣೆ ಶೆಡ್‌, 1 ವಾಣಿಜ್ಯ ಸಂಕೀರ್ಣ, 1 ಬೈಕ್‌, 1 ಕಾರು, 2 ಟ್ರ್ಯಾಕ್ಟರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT