ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಕರ ಟ್ರ್ಯಾಕ್ಟರ್ ಅಪಘಾತ: ಸಂಸದರ ಮಧ್ಯಸ್ಥಿಕೆ; ಶವಗಳ ಸ್ಥಳಾಂತರ

ಕನಕಪುರ ತಾಲ್ಲೂಕಿನ ದಬ್ಬಗುಳಿ ಬಳಿ ಭೀಕರ ಟ್ರ್ಯಾಕ್ಟರ್ ಅಪಘಾತ
Last Updated 22 ಡಿಸೆಂಬರ್ 2020, 1:53 IST
ಅಕ್ಷರ ಗಾತ್ರ

ಕನಕಪುರ: ದಬ್ಬಗುಳಿ ಬಳಿ ಸೋಮವಾರ ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟ ಐವರ ಶವವನ್ನು ರಾತ್ರಿ ಎಂಟರ ವೇಳೆಗೆ ಮರಣೋತ್ತರ ಪರೀಕ್ಷೆಗೆಂದು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ತರಲಾಯಿತು.

ಕೆರಳಾಳುಸಂದ್ರ ಗ್ರಾಮದ ಸುಮಾರು 25 ಜನರು ತಮಿಳುನಾಡು ಗಡಿ ಪ್ರದೇಶದಲ್ಲಿ ಬರುವ ದಬ್ಬಗುಳಿ ದೇವಸ್ಥಾನಕ್ಕೆ ಸೋಮವಾರ ಬೆಳಿಗ್ಗೆ ಟ್ರಾಕ್ಟರ್‌ ಮೂಲಕ ಹೋಗಿದ್ದ ವೇಳೆ ಅಪಘಾತ ಸಂಭವಿಸಿತ್ತು.

ಅಪಘಾತ ನಡೆದ ಸ್ಥಳವು ತಮಿಳುನಾಡಿನ ಅಂಚಟ್ಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುತ್ತಿದ್ದರಿಂದ ಅಲ್ಲಿಯೇ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಅಂಚಟ್ಟಿ ಪೊಲೀಸರು ಸ್ಥಳಕ್ಕೆಬಂದು ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ತಮಿಳುನಾಡಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಆದರೆ ಕರ್ನಾಟಕದಲ್ಲೇ ಶವ ಕೊಂಡೊಯ್ಯಲು ಮೃತರ ಸಂಬಂಧಿಕರು ಒತ್ತಾಯಿಸಿದರು. ಇದಕ್ಕೆ ಗಡಿ ಸಮಸ್ಯೆ ಎದುರಾಯಿತು.

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಸ್ಥಳಕ್ಕೆ ಆಗಮಿಸಿ, ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಲ್ಲಿನ ಪೊಲೀಸ್‌ ಅಧಿಕಾರಿಗಳಿಂದ ಅನುಮತಿ ಪಡೆದು ಮೃತದೇಹಗಳನ್ನು ಕನಕಪುರಕ್ಕೆ ಸ್ಥಳಾಂತರಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಮುಂತಾದವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು, ಮೃತದೇಹಗಳನ್ನುಕನಕಪುರಕ್ಕೆ ತರಲು ಶ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT