ಚಿಕ್ಕಮಗಳೂರು: ನಗರದ ಎಐಟಿ ವೃತ್ತ ಸಮೀಪ ಭಾನುವಾರ ರಾತ್ರಿ ಅಪಘಾತಕೀಡಾಗಿದ್ದ ಕಾರಿನಲ್ಲಿ ಶಾಸಕ ಸಿ.ಟಿ.ರವಿ ಭಾವಚಿತ್ರದ ಕ್ಯಾಲೆಂಡರ್‌ಗಳು, ಮದ್ಯದ ಪ್ಯಾಕೆಟ್‌ಗಳು, ಕತ್ತಿ (ಲಾಂಗ್) ಸಿಕ್ಕಿವೆ.
ಕಾರು, ಚಾಲಕ ಮಂಜುನಾಥ, ಮಾಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಕಾರು ಮತ್ತು ಜೀಪು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಮದ್ಯದ ಪೊಟ್ಟಣಗಳು, ಕತ್ತಿ, ಶಾಸಕ ಸಿ.ಟಿ.ರವಿ ಭಾವಚಿತ್ರದ ಕ್ಯಾಲೆಂಡರ್ ಗಳು ಪತ್ತೆಯಾಗಿವೆ. ಸ್ಥಳೀಯರು ಮತ್ತು ಕಾರಿನಲ್ಲಿದ್ದವರು ಪರಸ್ಪರ ವಾಗ್ವಾದ ಮಾಡಿದ್ದಾರೆ. ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ನಡೆಯುತ್ತಿದೆ' ಎಂದು ಪೊಲೀಸರು ತಿಳಿಸಿದ್ದಾರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.