ಸಿದ್ದರಾಮಯ್ಯ ಪ್ರಕಾರ ಹಿಂದೂಗಳನ್ನು ಹೀಗಳೆಯುವುದು ಸೆಕ್ಯುಲರಿಸಂ: ಸಿ.ಟಿ.ರವಿ

ಬೆಂಗಳೂರು: ‘ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರಕಾರ ಮುಸ್ಲಿಮರ ತುಷ್ಟೀಕರಣವೇ ಸೆಕ್ಯುಲರಿಸಂ, ಹಿಂದೂಗಳನ್ನು ಹೀಗಳೆಯುವುದು ಮತ್ತು ಅವರ ಭಾವನೆಗೆ ಧಕ್ಕೆ ತರುವುದೇ ಸೆಕ್ಯುಲರಿಸಂ ಆಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ತಮ್ಮನ್ನು ಕೋಮುವಾದಿ ಎಂದು ಸಿದ್ದರಾಮಯ್ಯ ಟೀಕಿಸಿದ್ದಕ್ಕೆ ತಿರುಗೇಟು ನೀಡಿರುವ ರವಿ, ‘ತಾವೊಬ್ಬ ಭಾರಿ ಸೆಕ್ಯುಲರ್‌ವಾದಿ ಎಂದು ಅವರು ಪೋಸ್ ಕೊಡುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
‘ಸಿದ್ದರಾಮಯ್ಯ ಅವರ ಸೆಕ್ಯುಲರಿಸಂ ಮಾದರಿ ಎಂದರೆ, ಟಿಪ್ಪು ಜಯಂತಿ ಹೆಸರಲ್ಲಿ ಅಮಾಯಕರ ಕಗ್ಗೊಲೆ, ಕುಂಕುಮ ಕಂಡರೆ ಭಯ ಎನ್ನುವುದು, ಸಾಬರ ಟೋಪಿ ಹಾಕಿ ಆನಂದಿಸುವುದು, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ದಂಗೆಕೋರರ ಪರ ನಿಲ್ಲುವುದು, ಶಾಸಕರ ಮನೆಗೆ ಬೆಂಕಿ ಇಟ್ಟವರಿಗೆ ಅಮಾಯಕರು ಎಂದು ಸರ್ಟಿಫಿಕೇಟ್ ನೀಡುವುದು’ ಎಂದು ಕಿಡಿಕಾರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.