ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸದ ಶ್ರೀಮಂತರ ವಿರುದ್ಧ ಕ್ರಮ: ಯಡಿಯೂರಪ್ಪ

Last Updated 16 ಫೆಬ್ರುವರಿ 2021, 9:36 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿಪಿಎಲ್‌ ಕಾರ್ಡ್‌ ಹೊಂದಲು ಹಿಂದೆ ಇದ್ದ ನಿಯಮಗಳನ್ನೇ ಮುಂದುವರಿಸಲಾಗುವುದು. ಆದರೆ, ಶ್ರೀಮಂತರು ಸ್ವಯಂ ಇಚ್ಚೆಯಿಂದ ತಾವು ಪಡೆದ ಕಾರ್ಡ್‌ಗಳನ್ನು ಹಿಂದಿರುಗಿಸಬೇಕು. ಹಿಂದಿರುಗಿಸದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸೋಗಾನೆ ವಿಮಾನನಿಲ್ದಾಣ ಕಾಮಗಾರಿಗಳನ್ನು ಮಂಗಳವಾರ ವೀಕ್ಷಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಬಿಪಿಎಲ್ ಕಾರ್ಡ್ ಸೌಲಭ್ಯ ಕೇವಲ ಬಡವರಿಗೆ ಸಿಗಬೇಕು. ಶ್ರೀಮಂತರು ಬಿಪಿಎಲ್ ಕಾರ್ಡ್ ಪಡೆಯುವುದಕ್ಕೆ ಕಡಿವಾಣ ಹಾಕಬೇಕು. ಇದುವರೆಗೂ ಬಿಪಿಎಲ್‌ ಪಡಿತರ ಪಡೆದ ಶ್ರೀಮಂತರಿಂದ ಮರಳಿ ಹಣ ವಸೂಲು ಮಾಡಲು ಸೂಚಿಸಲಾಗಿದೆ ಎಂದರು.

ಶಿವಮೊಗ್ಗ ವಿಮಾನನಿಲ್ದಾಣ ಒಂದು ವರ್ಷದ ಒಳಗೆ ವಿಮಾನಗಳ ಹಾರಾಟಕ್ಕೆ ಸಿದ್ಧವಾಗಲಿದೆ. ₹ 384 ಕೋಟಿ ವೆಚ್ಚದ ನಿಲ್ದಾಣದಲ್ಲಿ ಏರ್‌ಬಸ್‌ ಸೇರಿದಂತೆ ರಾತ್ರಿ ಸಮಯದಲ್ಲೂ ವಿಮಾನಗಳು ಇಳಿಯುವಂತೆ ಸಜ್ಜುಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT