ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೊ ಇಂಡಿಯಾಗೆ ‘ಏರ್‌ ಬಸ್‌’ ಸಜ್ಜು

Last Updated 20 ಜನವರಿ 2021, 17:55 IST
ಅಕ್ಷರ ಗಾತ್ರ

ಬೆಂಗಳೂರು: ‘ಏರೊ ಇಂಡಿಯಾ’ ವೈಮಾನಿಕ ಪ್ರದರ್ಶನ ಫೆ.3ರಿಂದ 5ರವರೆಗೆ ನಡೆಯಲಿದ್ದು, ಈ ಯುರೋಪಿನ ‘ಏರ್‌ಬಸ್‌’ ಸಂಸ್ಥೆಯ ವಿಮಾನ, ಹೆಲಿಕಾಪ್ಟರ್‌ಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.

‘ಏರ್‌ಬಸ್‌’ನ ಉತ್ಪನ್ನಗಳಾದ ಮಲ್ಟಿ ಟ್ಯಾಂಕರ್‌ ಟ್ರಾನ್ಸ್‌ಪೋರ್ಟ್‌ ವಿಮಾನ (ಎಂಆರ್‌ಟಿಟಿ) ವಿಮಾನ, ಯುದ್ಧ ವಿಶೇಷದ ಬಹೂಪಯೋಗಿ ಹೆಲಿಕಾಪ್ಟರ್‌, ಎಸ್‌850 ರಾಡಾರ್ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.

ಏರ್‌ಬಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರೆಮಿ ಮೈಲ್ಲಾರ್ಡ್, ‘ಏರೊ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ‘ಏರ್‌ಬಸ್‌’ ಭಾಗವಹಿಸುವಿಕೆಯು ಭಾರತೀಯ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ತ್ವರಿತ ಆಧುನೀಕರಣಕ್ಕೆ ನಾವು ನೀಡುತ್ತಿರುವ ಬದ್ಧತೆಯ ಪ್ರತೀಕ. ಈ ವಲಯದಲ್ಲಿ ನಾವು ಸಾಧಿಸಿದ ನಾವೀನ್ಯತೆ ಮತ್ತು ನೀಡುವ ಸೇವೆಗಳನ್ನು ಪ್ರದರ್ಶಿಸಲು ನಮಗೆ ಹೆಮ್ಮೆ ಎನಿಸುತ್ತದೆ’ ಎಂದು ಹೇಳಿದ್ದಾರೆ.

‘ಮೇಕ್‌ ಇನ್‌ ಇಂಡಿಯಾ’, ‘ಸ್ಕಿಲ್‌ ಇಂಡಿಯಾ’ ಮತ್ತು ‘ಸ್ಟಾರ್ಟ್‌ಅಪ್‌ ಇಂಡಿಯಾ’ ಉಪಕ್ರಮಗಳಿಗೆ ಏರ್‌ಬಸ್‌ ನೀಡುತ್ತಿರುವ ನೆರವಿನ ಬಗ್ಗೆಯೂ ಪ್ರದರ್ಶನ ಮಳಿಗೆಗಳಲ್ಲಿ ಮಾಹಿತಿ ಪಡೆಯಬಹುದು ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT