ಮಂಗಳವಾರ, ಸೆಪ್ಟೆಂಬರ್ 29, 2020
27 °C

ಏರ್ ಆಂಬುಲೆನ್ಸ್ ಸೇವೆಗೆ ಮುಖ್ಯಮಂತ್ರಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಐಕ್ಯಾಟ್ ಸಂಸ್ಥೆಯು ಖ್ಯಾತಿ ಕ್ಲೈಮೇಟ್ ಸಂಸ್ಥೆ ಸಹಯೋಗದಲ್ಲಿ ಆರಂಭಿಸಿರುವ ‘ಇಂಟೆಗ್ರೇಟೆಡ್ ಏರ್ ಆಂಬುಲೆನ್ಸ್’ ತುರ್ತು ವೈದ್ಯಕೀಯ ಸೇವೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಕ್ಕೂರು ಏರೋಡ್ರೋಂನಲ್ಲಿ ಮಂಗಳವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಯಡಿಯೂರಪ್ಪ, ‘ಭಾರತದಲ್ಲೇ ಇದೊಂದು ಪ್ರಥಮ ಮತ್ತು ವಿಶಿಷ್ಠ ಸೇವೆಯಾಗಿದೆ.  ಅನಾರೋಗ್ಯಕ್ಕೆ  ಒಳಗಾದವರಿಗೆ ತುರ್ತು ಸಂದರ್ಭದಲ್ಲಿ ಸೇವೆ ನೀಡುವ ಕಾರ್ಯವನ್ನು ಏರ್ ಆಂಬುಲೆನ್ಸ್‌ಗಳು ಮಾಡಲಿವೆ. ರಾಜ್ಯದ ವಿವಿಧ ನಗರಗಳಲ್ಲಿನ ಆಸ್ಪತ್ರೆಗಳಿಗೆ ಸಂಪರ್ಕ ಸಾಧಿಸಿ, ತ್ವರಿತವಾಗಿ ರೋಗಿಗಳನ್ನು ಒಯ್ಯಲು ಈ ಸೇವೆಯು ಸಹಕಾರಿ’ ಎಂದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ‘ಕೊರೊನಾ ಸೋಂಕು ಸಂಕಷ್ಟ ಪರಿಸ್ಥಿತಿಯಲ್ಲಿ ಐಕ್ಯಾಟ್ ಸಂಸ್ಥೆಯು ಇಂತಹ ಅಗತ್ಯ ಸೇವೆಯನ್ನು ಆರಂಭಿಸಿರುವುದು ಶ್ಲಾಘನೀಯ ಕಾರ್ಯ’ ಎಂದರು.

ಐಕ್ಯಾಟ್ ಸಂಸ್ಥೆಯ ಸಹ ಸಂಸ್ಥಾಪಕಿ ಡಾ.ಶಾಲಿನಿ ನಾಲ್ವಾಡ್ ಅವರು, ’ತುರ್ತು ಸ್ಥಿತಿಗಳಿಗೆ ಅನುಗುಣವಾಗಿ ಸೇವೆಗಳನ್ನು ಪೂರೈಸಲು ಉತ್ತಮ ವೈದ್ಯಕೀಯ ಸೇವೆಗಳ ಅಗತ್ಯವಿದೆ. ಏರ್ ಆಂಬುಲೆನ್ಸ್ ಸೇವೆ ಜನರಿಗೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು