ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ ಕಾಲುವೆ: ಡಿಪಿಆರ್‌ಗೆ ಒಪ್ಪಿಗೆ

Last Updated 29 ಡಿಸೆಂಬರ್ 2021, 20:01 IST
ಅಕ್ಷರ ಗಾತ್ರ

ಬೆಂಗಳೂರು: ಆಲಮಟ್ಟಿ ಎಡದಂಡೆ ಕಾಲುವೆಯ ಕಿ.ಮೀ 0.00 ಯಿಂದ 68.24 ವರೆಗಿನ ಬಾಕಿ ಉಳಿದ ಹಾಗೂ ವಿತರಣಾ ಕಾಲುವೆಗಳ ಸ್ಟ್ರಕ್ಚರ್‌ ಒಳಗೊಂಡಂತೆ ಆಧುನಿಕ ಕಾಮ ಗಾರಿಯ ವಿವರವಾದ ಯೋಜನಾ ವರದಿಗೆ(ಡಿಪಿಆರ್‌) ಆಡಳಿತಾತ್ಮಕ ಅನು
ಮೋದನೆ ಸಿಕ್ಕಿದೆ. ಈ ಕಾಮಗಾರಿಯ ಅಂದಾಜು ಮೊತ್ತ ₹ 75.41 ಕೋಟಿ.

ಅಲ್ಲದೆ, ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ಕಿ.ಮೀ 0.00 ರಿಂದ 68.24 ವರೆಗಿನ ಹಾಳಾಗಿರುವ ಆಯ್ದ ಭಾಗಗಳ ಹಾಗೂ ವಿತರಣಾ ಕಾಲುವೆಗಳ ಸ್ಟ್ರಕ್ಚರ್‌ ಒಳಗೊಂಡ ಆಧುನೀಕರಣ ಕಾಮಗಾರಿಯ ₹112.48 ಕೋಟಿ ಅಂದಾಜು ಮೊತ್ತದ (2016–17 ನೇ ಸಾಲಿನ ದರಪಟ್ಟಿ ಅನ್ವಯ) ವಿವರ ವಾದ ಯೋಜನಾ ವರದಿಗೆ(ಡಿಪಿಆರ್‌) ಆಡಳಿತಾತ್ಮಕ ಅನುಮೋದನೆ ನೀಡ ಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಈಗಾಗಲೇ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ಕಿ.ಮೀ 0.00 ರಿಂದ 68.24 ವರೆಗಿನ (ಆಯ್ದ ಭಾಗಗಳ) ಸ್ಟ್ರಕ್ಚರ್‌ ಒಳಗೊಂಡಂತೆ ಆಧುನೀಕರಣದ ಪ್ಯಾಕೇಜ್‌ ಕಾಮಗಾರಿ ಪೂರ್ಣಗೊಂಡಿದೆ. ಕಿ.ಮೀ 0.00 ರಿಂದ 68.42 ವರೆಗಿನ (ಆಯ್ದ ಭಾಗಗಳ) ವಿತರಣಾ ಕಾಲುವೆಗಳ ಆಧುನೀಕರಣದ ಕಾಮಗಾರಿಗಳನ್ನು 3 ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ವಹಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT