ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಬುಲೆನ್ಸ್ ಅಪಘಾತ- ಪರಿಹಾರಕ್ಕೆ ವಿಮಾ ಕಂಪನಿ ಬಾಧ್ಯಸ್ಥ: ಹೈಕೋರ್ಟ್

Last Updated 27 ಜನವರಿ 2023, 22:49 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್‌ನಲ್ಲಿ ಸಾಗಿಸುವ ವೇಳೆ ಅಪಘಾತ ಸಂಭವಿಸಿದ ಪರಿಣಾಮ ಗಾಯಗಳಾಗಿ ರೋಗಿ ಸಾವಿಗೀಡಾದ ಪ್ರಕರಣವೊಂದರಲ್ಲಿ ಮೃತನ ಕಟುಂಬ ಸ್ಥರಿಗೆ ಪರಿಹಾರ ನೀಡದೆ ಮೇಲ್ಮನವಿ ಸಲ್ಲಿಸಿದ್ದ ವಿಮಾ ಕಂಪನಿಯ ಅರ್ಜಿ
ಯನ್ನು ಹೈಕೋರ್ಟ್ ವಜಾಗೊಳಿಸಿದೆ.

‘ಅಪಘಾತದ ಸಂಭವಿಸಿದ ಪರಿ ಣಾಮದಿಂದಲೇ ರೋಗಿಯು ತೀವ್ರವಾಗಿ ಗಾಯಗೊಂಡಿದ್ದಾರೆ. ಅದರಿಂದಲೇ ಅವರ ಕಾಯಿಲೆ ಉಲ್ಬಣಿಸಿ ಸಾವಿಗೀಡಾಗಿದ್ದಾರೆ. ಆದ್ದರಿಂದ, ಮೃತನ ಕುಟುಂಬದವರಿಗೆ ಪರಿಹಾರ ನೀಡಬೇಕು’ ಎಂದು ನ್ಯಾಯ ಪೀಠ ವಿಮಾ ಕಂಪನಿಗೆ ತಾಕೀತು ಮಾಡಿದೆ. ‘ರೋಗಿಯ ಸಾವಿಗೂ ಅಪಘಾತಕ್ಕೂ ಯಾವುದೇ ಸಂಬಂಧ ವಿಲ್ಲ. ಕಾಯಿಲೆಯಿಂದಲೇ ರೋಗಿ ಸಾವಿಗೀಡಾಗಿದ್ದು, ಮೃತನ ಕುಟುಂಬ ಸ್ಥರಿಗೆ ಪರಿಹಾರ ನೀಡಲು ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ (ಎಂವಿಸಿಟಿ) ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ವಿಮಾ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಈ ಪ್ರಕರಣದಲ್ಲಿ ಸಾವೀಗೀಡಾಗಿರುವ ರವಿ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದರು ಎಂಬುದೇನೊ ಸರಿ. ಜಾಂಡಿಸ್ ಮಾರಣಾಂತಿಕವಲ್ಲ ನಿಜ. ಆದರೆ, ರೋಗಿಯನ್ನು ಕರೆದೊಯ್ಯುತ್ತಿರುವ ಬಗ್ಗೆ ತಿಳಿವಳಿಕೆಯಿದ್ದರೂ ಚಾಲಕ ಆಂಬುಲೆನ್ಸ್ ಅನ್ನು ಅಜಾಗರೂಕತೆಯಿಂದ ಚಲಾಯಿಸಿ ಅಪಘಾತಕ್ಕೆ ಕಾರಣ ನಾಗಿದ್ದಾನೆ. ಈ ಅಪಘಾತದಿಂದ ಉಂಟಾದ ಗಾಯಗಳು ಕಾಯಿಲೆ ಉಲ್ಬಣಗೊಳ್ಳಲು ಕಾರಣವಾಗಿದೆ. ಇದ
ರಿಂದಲೇ ರವಿ ಮೃತಪಟ್ಟಿ ದ್ದಾರೆ. ಆದ್ದರಿಂದ, ರವಿಯ ಸಾವಿಗೂ ಮತ್ತು ಅಪಘಾತಕ್ಕೂ ಒಂದಕ್ಕೊಂದು ಸಂಬಂಧವಿದೆ’ ಎಂದು
ಅಭಿಪ್ರಾಯಪಟ್ಟಿದೆ.

‘ನ್ಯುಮೋನಿಯಾ, ಕ್ಷಯರೋಗ ದಿಂದ ಬಳಲುತ್ತಿದ್ದ ರವಿ ಈ ಕಾಯಿಲೆ ಗಳಿಂದ ಮೃತ ಹೊಂದಿದ್ದಾರೆಯೇ ಹೊರತು ಅಪಘಾತದಿಂದ ಅಲ್ಲ’ ಎಂಬ ವಿಮಾ ಕಂಪನಿ ಪರ ವಕೀಲರ ವಾದವನ್ನು ನ್ಯಾಯಪೀಠ ತಳ್ಳಿ ಹಾಕಿದೆ.

ಪರಿಹಾರದ ಮೊತ್ತವನ್ನು 8 ವಾರಗ ಳಲ್ಲಿ ಮೃತನ ಕುಟುಂಬದವರಿಗೆ ಪಾವತಿ ಸಲು ವಿಮಾ ಕಂಪನಿಗೆ ನಿರ್ದೇಶಿಸಿದೆ.

ಚಿಕ್ಕಮಗಳೂರಿನ ಕಬ್ಬಿನಹಳ್ಳಿ ರವಿ ಎಂಬುವರು ಜಾಂಡಿಸ್ ಕಾಯಿಲೆ ಯಿಂದ ಬಳಲುತ್ತಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್‌ನಲ್ಲಿ 2010ರ ಏಪ್ರಿಲ್ 13ರಂದು ಕರೆದೊಯ್ಯಲಾಗುತ್ತಿತ್ತು. ಆಂಬುಲೆನ್ಸ್ ಮಾರ್ಗಮಧ್ಯೆ ಮುಗುಚಿ ಬಿದ್ದಿತ್ತು. ಇದರಿಂದ ಆಂಬುಲೆನ್ಸ್ ಒಳಗಿದ್ದ ರವಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಅವರು ಮೃತಪಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿ ಹಾರ ಕ್ಲೇಮಿನ ಅರ್ಜಿ ವಿಚಾರಣೆ ನಡೆ ಸಿದ್ದ ಮಂಗಳೂರಿನ ಎಂಎಸಿಟಿ, ಮೃತನ ಕುಟುಂಬದವರಿಗೆ ವಾರ್ಷಿಕ ಶೇ.6ರ ಬಡ್ಡಿ ದರದೊಂದಿಗೆ ₹ 5.50 ಲಕ್ಷ ಪರಿಹಾರ ಪಾವತಿಸುವಂತೆ 2014ರ ಮಾರ್ಚ್ 3ರಂದು ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT