ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯಲ್ಲಿ ಕನ್ನಡದ ಕಂಪು ಪಸರಿಸಿದ್ದ ಅನಂತ ಕುಮಾರ್‌: ಟಿ.ಎಸ್.ನಾಗಾಭರಣ

Last Updated 22 ಜನವರಿ 2022, 17:17 IST
ಅಕ್ಷರ ಗಾತ್ರ

ಬೆಂಗಳೂರು: ‘ಅನಂತ ಕುಮಾರ್ ಅವರಿಂದಾಗಿ ವಿಶ್ವಸಂಸ್ಥೆಯಲ್ಲಿ ಕನ್ನಡದ ಮಾತು ಕೇಳಲು ಸಾಧ್ಯವಾಯಿತು. ಅವರು ಆಡಿದ ಕೆಲವೇ ಪದಗಳಿಂದ ನಮ್ಮ ಭಾಷೆಯ ಕಂಪು ವಿಶ್ವಮಟ್ಟದಲ್ಲಿ ಪಸರಿಸಿತು’ ಎಂದುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ಅನಂತ ಕುಮಾರ್ ಪ್ರತಿಷ್ಠಾನವು ‘ಅನಂತ ಪಥ’ ಸಂಚಿಕೆ ಬಿಡುಗಡೆಗಾಗಿ ಆನ್‌ಲೈನ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತೀಯ ಪ‍ರಂಪರೆಯಲ್ಲಿ ಕರ್ನಾಟಕದ ಮತ್ತು ಕನ್ನಡಿಗರ ವಿಶ್ವಮಾನವ ತತ್ವವನ್ನು ರೂಢಿಸಿಕೊಂಡು, ಬೆಳೆಸಿದವರು ಅನಂತಕುಮಾರ್.ಭಾಷೆ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿದ್ದ ಅವರುಕನ್ನಡಕ್ಕಾಗಿ ನಿರಂತರ ಕೆಲಸ ಮಾಡಿದ ಬಹುಮುಖ್ಯ ರಾಜಕೀಯ ನಾಯಕ’ ಎಂದರು.

‘ಕನ್ನಡ ಭಾಷೆ, ನೆಲ ಮತ್ತು ಜಲದ ವಿಚಾರದಲ್ಲಿ ಯಾವುದೇ ತೊಂದರೆ ಎದುರಾದರೂ ಅದರ ನಿವಾರಣೆಗಾಗಿ ಮುಂಚೂಣಿಯಲ್ಲಿ ನಿಂತು ಶ್ರಮಿಸುತ್ತಿದ್ದರು. ತಾರ್ಕಿಕ ಅಂತ್ಯಕ್ಕೆ ತಲುಪಿಸುತ್ತಿದ್ದರು. ಕನ್ನಡ ಕಾರ್ಯಕರ್ತರಿಗೆ ಅವರ ಮನೆ ತೆರೆದ ಬಾಗಿಲು. ಅವರ ಆತಿಥ್ಯ ಪಡೆಯದ ಕನ್ನಡ ಕಾರ್ಯಕರ್ತ ಇರಲು ಸಾಧ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT