ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಇಲಾಖೆ ಮಾಹಿತಿ ಪಡೆದ ಆಂಧ್ರ ಸಚಿವರು

Last Updated 24 ಜನವರಿ 2023, 22:54 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರಪ್ರದೇಶ ಕಂದಾಯ ಸಚಿವ ಧರ್ಮನಾ ಪ್ರಸಾದ್‌ ರಾವ್‌ ನೇತೃತ್ವದ ನಿಯೋಗವು ವಿಧಾನಸೌಧಕ್ಕೆ ಮಂಗಳವಾರ ಭೇಟಿ ನೀಡಿ, ರಾಜ್ಯದಲ್ಲಿ ಕಂದಾಯ ಇಲಾಖೆಯು ಜಾರಿಗೊಳಿಸಿರುವ ಸುಧಾರಣಾ ಕ್ರಮಗಳ ಕುರಿತು ಚರ್ಚೆ ನಡೆಸಿತು.

ಕಂದಾಯ ಸಚಿವ ಆರ್‌. ಅಶೋಕ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಯರಾಂ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು, ಸಾಮಾಜಿಕ ಪಿಂಚಣಿ ವಿತರಣೆಯಲ್ಲಿ ಸುಧಾರಣೆ, ಭೂ ಪರಿವರ್ತನೆ ಪ್ರಕ್ರಿಯೆಯ ಅವಧಿ ಇಳಿಕೆ, ಪ್ಲಾಂಟೇಷನ್‌ ಬೆಳೆಗಾರರಿಗೆ ಸರ್ಕಾರಿ ಜಮೀನುಗಳನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಕಾಯ್ದೆ ಜಾರಿ ಮಾಡಿರುವುದು, ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುತ್ತಿರುವುದರ ಕುರಿತು ಮಾಹಿತಿ ನೀಡಿದರು.

ಆಂಧ್ರಪ್ರದೇಶ ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವ ಆದಿಮುಲುಪು ಸುರೇಶ್‌, ಸಮಾಜ ಕಲ್ಯಾಣ ಸಚಿವ ಮುರುಗ ನಾಗಾರ್ಜುನ, ಶಾಸಕಿ ಎಲ್‌. ಪದ್ಮಾವತಿ ಹಾಗೂ ಅಲ್ಲಿನ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT