ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ಬಿ ಪಟ್ಟಿಗೆ ಇನ್ನೂ 22 ಜಾತಿ ಸೇರ್ಪಡೆಗೆ ಶಿಫಾರಸು:.ಜಯಪ್ರಕಾಶ ಹೆಗ್ಡೆ

Last Updated 16 ಮಾರ್ಚ್ 2023, 4:35 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ 3(ಬಿ) ಪಟ್ಟಿಗೆ ಹೊಸದಾಗಿ 22 ಉಪಜಾತಿಗಳನ್ನು ಸೇರ್ಪಡೆ ಮಾಡಲು ಶಿಫಾರಸು ಮಾಡಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ತಿಳಿಸಿದರು.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸದ್ಯ 900ಕ್ಕೂ ಹೆಚ್ಚು ಜಾತಿಗಳಿವೆ. ಪ್ರವರ್ಗ 3(ಎ) ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವಿದ್ದು, 3(ಬಿ)ನಲ್ಲಿ ಈ ಹಿಂದೆ 23 ಸಮುದಾಯಗಳಿದ್ದವು. ಅದಕ್ಕೆ 2009ರಲ್ಲಿ 19 ಉಪಜಾತಿಗಳನ್ನು ಸೇರ್ಪಡೆ ಮಾಡಲಾಗಿತ್ತು. ಅವುಗಳ ಪೈಕಿ ಪಂಚಮಸಾಲಿ ಸಮುದಾಯ ಹೊರತು
ಪಡಿಸಿ 18 ಜಾತಿಗಳನ್ನು ಮತ್ತೆ ಕೈಬಿಡಲಾಗಿತ್ತು ಎಂದು ವಿವರಿಸಿದರು.

ಪಂಚಮಸಾಲಿ ಸೇರಿ 24 ಜಾತಿಗಳಿದ್ದು, ಯಾವುದೇ ಮೀಸಲಾತಿ ಪಟ್ಟಿಯಲ್ಲಿ ಇಲ್ಲದ 22 ಉಪಜಾತಿಗಳನ್ನು ಗುರುತಿಸಿ ಅವುಗಳನ್ನು ಈ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದು ಸೂಕ್ತ ಎಂದು ವರದಿ ನೀಡಲಾಗುತ್ತಿದೆ. 3(ಬಿ) ಪಟ್ಟಿಯಲ್ಲಿ ಒಟ್ಟು 46 ಉಪಜಾತಿಗಳು ಉಳಿಯಲಿವೆ ಎಂದು ಹೇಳಿದರು.

3(ಬಿ) ಪಟ್ಟಿಗೆ ಹೊಸದಾಗಿ ಸೇರ್ಪಡೆ ಮಾಡುವುದು ಸುಲಭ. ಅಲ್ಲಿಂದ ಯಾವ ಸಮುದಾಯವನ್ನು 2(ಎ) ಪಟ್ಟಿಗೆ ವರ್ಗಾಯಿಸಬೇಕು ಎಂಬುದು ಸವಾಲಿನ ಕೆಲಸ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT