ಬುಧವಾರ, ಸೆಪ್ಟೆಂಬರ್ 22, 2021
29 °C

ಎಪಿಎಂಸಿ ಸೆಸ್‌ ಪಾಲು ಇಳಿಕೆ: ಸಂಪುಟ ಸಭೆಯಲ್ಲಿ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳಿಗೆ ಸೆಸ್‌ನಲ್ಲಿ ದೊರೆಯುತ್ತಿದ್ದ ಪಾಲನ್ನು ಶೇಕಡ 1ರಿಂದ ಶೇ 0.60ಗೆ ಇಳಿಸಲು ಸೋಮವಾರ ನಡೆದ ಸಂಪುಟ ಸಭೆ ನಿರ್ಧರಿಸಿದೆ.

ಎಪಿಎಂಸಿ ಕಾಯ್ದೆಯ ತಿದ್ದುಪಡಿಗೂ ಮುನ್ನ ಸೆಸ್‌ನಲ್ಲಿ ಶೇ 1.50ಯಷ್ಟು ಎಪಿಎಂಸಿಗಳಿಗೆ ದೊರಕುತ್ತಿತ್ತು. ಕಾಯ್ದೆ ತಿದ್ದುಪಡಿ ವೇಳೆ ಈ ಮೊತ್ತವನ್ನು ಶೇ 0.35ಕ್ಕೆ ಇಳಿಸಲಾಗಿತ್ತು. ಆದರೆ, ಆದಾಯದ ಕುಸಿತದಿಂದ ಎಪಿಎಂಸಿಗಳ ನಿರ್ವಹಣೆ ಕಷ್ಟವಾಗಲಿದೆ ಎಂಬ ಕಾರಣದಿಂದ ಮತ್ತೆ ತೀರ್ಮಾನ ಬದಲಿಸಲಾಗಿತ್ತು. ಶೇ 2ರಷ್ಟು ಸೆಸ್‌ನಲ್ಲಿ ಶೇ 1ರಷ್ಟನ್ನು ವರ್ತಕರಿಗೆ ಮತ್ತು ಶೇ 1ರಷ್ಟನ್ನು ಎಪಿಎಂಸಿಗಳಿಗೆ ಹಂಚಿಕೆ ಮಾಡಲಾಗಿತ್ತು.

‘ಕೇವಲ ಶೇ 1ರಷ್ಟು ಸೆಸ್‌ ಪಡೆದು ವಹಿವಾಟು ನಿರ್ವಹಿಸುವುದು ಕಷ್ಟ ಎಂಬ ಕಾರಣ ನೀಡಿ ರಾಜ್ಯದ ಹಲವೆಡೆ ವರ್ತಕರು ಎಪಿಎಂಸಿಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದ ಎಪಿಎಂಸಿಗಳಿಗೆ ಸೆಸ್‌ನಲ್ಲಿ ನೀಡುತ್ತಿದ್ದ ಪಾಲನ್ನು ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಶೇ 1.40ಯಷ್ಟು ಮೊತ್ತವನ್ನು ವರ್ತಕರಿಗೂ, ಶೇ 0.60ರಷ್ಟು ಪಾಲನ್ನು ಎಪಿಎಂಸಿಗಳಿಗೂ ಹಂಚಿಕೆ ಮಾಡುವ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಮಾಡಲಾಗಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಮಾರುಕಟ್ಟೆಯ ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ವಹಿವಾಟಿನ ಮೇಲೂ ಸೆಸ್‌ ವಿಧಿಸಬೇಕೆಂಬ ಎಪಿಎಂಸಿಗಳ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿಲ್ಲ. ಅದು ಎಪಿಎಂಸಿ ಕಾಯ್ದೆಯ ತಿದ್ದುಪಡಿಗೆ ವಿರುದ್ಧವಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು