ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿಗಳಿಗೆ ಈಗ ನೇಮಕಾತಿ ಸೂಕ್ತವಲ್ಲ: ಬರಗೂರು ರಾಮಚಂದ್ರಪ್ಪ

Last Updated 23 ಫೆಬ್ರುವರಿ 2023, 22:31 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸಭೆ ಚುನಾವಣೆ ತೀರಾ ಹತ್ತಿರದಲ್ಲಿರುವಾಗ ಸಾಂಸ್ಕೃತಿಕ ಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸುವುದು ಸೂಕ್ತವಲ್ಲ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದ್ದಾರೆ.

‘ಅಕಾಡೆಮಿಗಳ ರಚನೆ ಕುರಿತು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಉನ್ನತ ಶಿಕ್ಷಣ ಸಚಿವರು, ‘ಶೀಘ್ರದಲ್ಲೇ ಹೊಸ ಸಮಿತಿ ರಚಿಸಲಾಗುವುದು. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದ ಉತ್ತರ ಕೊಡಿಸಲಾಗುವುದು’ ಎಂದು ಹೇಳಿದ್ದಾರೆ.

‘ಚುನಾವಣೆ ಬಳಿಕ ಬೇರೆ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಹಾಲಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ರಾಜೀನಾಮೆ ಕೇಳಲಾಗುತ್ತದೆ. ಹಾಗಾದಲ್ಲಿ, ಈ ಸರ್ಕಾರದಿಂದ ನೇಮಕಗೊಂಡವರು ಕೆಲವೇ ತಿಂಗಳು ನಾಮಕಾವಸ್ತೆ ಇದ್ದಂತಾಗುತ್ತದೆ. ಸರ್ಕಾರಗಳು ಬದಲಾದ ಕೂಡಲೇ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರಿಂದ ರಾಜೀನಾಮೆ ಪಡೆಯುವ ಪ್ರವೃತ್ತಿ ತಪ್ಪಿಸಬೇಕು. ಈ ಬಗ್ಗೆ ನನ್ನ ನೇತೃತ್ವದ ಸಮಿತಿಯು ಹಿಂದಿನ ಸರ್ಕಾರಕ್ಕೆ ಸಲ್ಲಿಸಿದ ‘ಸಾಂಸ್ಕೃತಿಕ ನೀತಿ’ಯ ವರದಿಯಲ್ಲಿ ಒಂದು ಮಾದರಿ ಮಾರ್ಗವನ್ನು ಶಿಫಾರಸು ಮಾಡಿತ್ತು. ಕುಲಪತಿಗಳ ಆಯ್ಕೆಗೆ ಶೋಧನಾ ಸಮಿತಿ ರಚಿಸಿ ಹೆಸರುಗಳನ್ನು ಪಡೆದಂತೆ, ಅಕಾಡೆಮಿಗಳ ನೇಮಕಕ್ಕೂ ಅದನ್ನೇ ಅನ್ವಯಿಸಬೇಕು. ಮುಂದೆ ಬರುವ ಸರ್ಕಾರ ಈ ಶಿಫಾರಸುಗಳ ಬಗ್ಗೆ ಸಾಂಸ್ಕೃತಿಕ ವಲಯದವರ ಜೊತೆಗೆ ಸಮಾಲೋಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT