ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ-ವಿವಾದ ಮುಗಿದಿದೆ, ಜಡ್ಜ್‌ಮೆಂಟ್‌ಗಾಗಿ‌ ಕಾಯುತ್ತಿದ್ದೇವೆ: ಸಚಿವ ಯೋಗೇಶ್ವರ್

Last Updated 29 ಜೂನ್ 2021, 19:35 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್, ವಾದ-ವಿವಾದ ಮುಗಿದಿವೆ.ಜಡ್ಜ್‌ಮೆಂಟ್‌ಗಾಗಿ ಕಾಯುತ್ತಿದ್ದೇವೆ ಎಂದು ಚುಟುಕಾಗಿ ತಿಳಿಸಿದರು.

ವಿಜಯಪುರಕ್ಕೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ವಿಚಾರ ಇವಾಗ ಕಾಂಗ್ರೆಸ್ ನಲ್ಲಿ ಪ್ರಾರಂಭವಾಗಿದೆ. ನೀವು ಅವರ ಬಗ್ಗೆ ಚಿಂತನೆ ಮಾಡಬೇಕು ಎಂದರು.

'ನಮ್ಮ ವರಿಷ್ಠರು ಕೊರೊನಾದಲ್ಲಿ ಮಾರ್ಗಸೂಚಿ ಕೊಟ್ಟ ಹಾಗೆ ಇದಕ್ಕೂ ಏನಾದರೂ ಕೊಡುತ್ತಾರೆ. ಭಾರತಿಯ ಜನತಾ ಪಕ್ಷದ ಕಾರ್ಯಕರ್ತನಾಗಿ ನನ್ನ ಭಾವನೆಗಳನ್ನು ಹೇಳಿಕೊಂಡಿದ್ದೇನೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಏನಾದರೂ ಇದ್ದರೆ ಸರಿ ಮಾಡಿಕೊಂಡು ಹೋಗುತ್ತೇವೆ' ಎಂದರು.

ಕಾಂಗ್ರೆಸ್‌ನಲ್ಲಿ ದಲಿತರು ಮುಖ್ಯಮಂತ್ರಿ ಆಗಬೇಕು ಅಂತಾ ಧ್ವನಿ ಎತ್ತಿದ್ದರು. ಸಿದ್ದರಾಮಯ್ಯ ಸಿ.ಎಂ. ಆದ ಸಂದರ್ಭದಲ್ಲೇ ದಲಿತ ಸಿ.ಎಂ ಆಗಬೇಕು ಅನ್ನುವ ಕೂಗು ಇತ್ತು. ಇವಾಗ ಮತ್ತೆ ಎದ್ದಿದೆ. ಚುನಾವಣೆ ಇನ್ನೂ ಎರಡು ವರ್ಷ ದೂರ ಇದೆ. ಏನಾಗುತ್ತದೆ ಮುಂದೆ ನೋಡೋಣ ಎಂದು ಹೇಳಿದರು.

ಡಿಕೆಶಿಗೆ ಅವಕಾಶ ಕೊಡಲ್ಲ: ಸಿದ್ದರಾಮಯ್ಯ ಇರೋವರೆಗೂ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ಕೊಡಲ್ಲ.

ಶಿವಕುಮಾರ್ ಕನಸು ಕಾಣುತ್ತಿದ್ದಾರೆ ಕಾಣಲಿ ಎಂದು ವ್ಯಂಗ್ಯವಾಡಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT