ಸೋಮವಾರ, ಆಗಸ್ಟ್ 8, 2022
24 °C

ಅಪೊಲೊ ಆಸ್ಪತ್ರೆಯಿಂದ ಅರಣ್ಯ ಕಾವಲುಗಾರರಿಗೆ ಚಿಕಿತ್ಸಾ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅರಣ್ಯ ಕಾವಲುಗಾರರಿಗೆ ಅನ್ವಯಿಸುವಂತೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಹಾಗೂ ಅವರ ವೈದ್ಯಕೀಯ ವೆಚ್ಚ ಭರಿಸಲು ಅಪೊಲೊ ಆಸ್ಪತ್ರೆಯು ಮುಂದಾಗಿದೆ.

ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸುವ, ಅರಣ್ಯದಲ್ಲಿ ವಾಸವಿರುವ ಸಮುದಾಯಗಳ ಆರೋಗ್ಯ ರಕ್ಷಣೆಗೆ ಒತ್ತುನೀಡಲಾಗುತ್ತದೆ ಎಂದು ಆಸ್ಪತ್ರೆ ತಿಳಿಸಿದೆ.

ಅಪೊಲೊ ಆಸ್ಪತ್ರೆಯ ಸಿಎಸ್‌ಆರ್‌ ಚಟುವಟಿಕೆ ಉಪಾಧ್ಯಕ್ಷೆ, ಯುಆರ್‌ ಲೈಫ್‌ನ ಸ್ಥಾಪಕಿ ಉಪಾಸನಾ ಕಮಿನೇನಿ ಕೊನಿಡೆಲ ಅವರು ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವನ್ಯಜೀವಿಗಳ ಜೊತೆಗಿನ ಸಂಘರ್ಷದ ವೇಳೆ ಗಾಯಗೊಳ್ಳುವ ಅರಣ್ಯ ಕಾವಲುಗಾರರಿಗೆ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು.
ಅರಣ್ಯ ಸಂಬಂಧಿ ಚಟುವಟಿಕೆಗಳ ವೇಳೆ ಸಂಭವಿಸಿದ ಯಾವುದೇ ಪೆಟ್ಟು, ಗಾಯಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು