ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರಿನಲ್ಲಿ ಸಾಮಾನ್ಯ ಮಳೆ

Last Updated 28 ಮೇ 2021, 21:44 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಜೂನ್‌ನಿಂದ ಸೆ‍ಪ್ಟೆಂಬರ್‌ವರೆಗಿನ ಮುಂಗಾರು ಅವಧಿಯಲ್ಲಿ ಸಾಧಾರಣ ಮಳೆ ಸುರಿಯಲಿದೆ’ ಎಂದು ಹಿರಿಯ ಭೂವಿಜ್ಞಾನಿ ಡಾ.ಎಚ್.ಎಸ್.ಎಂ.ಪ್ರಕಾಶ್ ತಿಳಿಸಿದ್ದಾರೆ.

‘ಈ ಮುಂಗಾರಿನಲ್ಲಿ ಸಾಧಾರಣ ಮಳೆ ನಿರೀಕ್ಷಿಸಬಹುದು. 2018 ಮತ್ತು 2019ರ ಅವಧಿಯಲ್ಲಿ ನಡೆದ ಕೆಲವು ವಿಶೇಷ ಅಪರೂಪದ ಭೂವೈಜ್ಞಾನಿಕ ಘಟನೆಗಳು ಮತ್ತು ಆವಿ ಮೂಲಗಳು ಈ ವರ್ಷ ಸಕ್ರಿಯವಾಗಿಲ್ಲ’.

‘ಕೊಡಗು ಮತ್ತು ಕೇರಳ ಪ್ರಾಂತ್ಯಗಳಿಗೆ ವಿಶೇಷ ಸಿದ್ಧತೆಗಳ ಅವಶ್ಯಕತೆ ಇರುವುದಿಲ್ಲ. ಹವಾಮಾನ ದುರಂತಗಳು ವಿರಳವಾಗಿರಲಿವೆ’ ಎಂದೂ ಹೇಳಿದ್ದಾರೆ.

ವಿಜಯಪುರ, ಬೆಳಗಾವಿಯಲ್ಲಿ ಮಳೆ: ವಿಜಾಪುರರ ಜಿಲ್ಲೆಯ ತಿಕೋಟಾ, ಕೊಲ್ಹಾರ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ, ತಾಳಿಕೋಟೆ ವ್ಯಾಪ್ತಿಯಲ್ಲಿ ಗುಡುಗು, ಗಾಳಿಯ ಅಬ್ಬರದೊಂದಿಗೆ ಶುಕ್ರವಾರ ಧಾರಾಕಾರ ಮಳೆಯಾಗಿದೆ.

ಬೆಳಗಾವಿ ಜಿಲ್ಲೆಯಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ, ಜಾಗನೂರು, ಗೋಕಾಕ ತಾಲ್ಲೂಕಿನ ವಿವಿಧೆಡೆ ಹಾಗೂ ಬಾಗಲಕೋಟೆ ನಗರದಲ್ಲಿ ಧಾರಾಕಾರ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT