ಬೆಂಗಳೂರು: ‘ಪಾಪ್ ಸಂಗೀತ ಕಲಾವಿದೆ ರಿಹಾನಾ ಹಾಗೂ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಅವರು ಟೀಕಿಸಿರುವುದು ಕೇಂದ್ರ ಸರ್ಕಾರದ ನೀತಿಯನ್ನೇ ವಿನಾ ಭಾರತವನ್ನಾಗಲಿ, ನಮ್ಮ ಸಂಸ್ಕೃತಿ, ಆಚಾರ–ವಿಚಾರಗಳನ್ನಾಗಲಿ ಅಲ್ಲ’ ಎಂದು ಕಾಂಗ್ರೆಸ್ ಮುಖಂಡ ಪ್ರೊ. ಬಿ.ಕೆ. ಚಂದ್ರಶೇಖರ್ ಹೇಳಿದ್ದಾರೆ.
‘ಸರ್ಕಾರದ ನೀತಿಯನ್ನು ಟೀಕಿಸಿದ ವಿದೇಶಿ ಸೆಲೆಬ್ರಿಟಿಗಳನ್ನು ಪಟ್ಟಭದ್ರ ಹಿತಾಸಕ್ತರು ಎಂದು ಸರ್ಕಾರ ದೂರಿದೆ. ದೇಶದ ಕೆಲವು ಸೆಲೆಬ್ರಿಟಿಗಳೂ ಇದನ್ನೇ ಪುನರುಚ್ಛರಿಸಿದ್ದಾರೆ. ಆದರೆ, ಸರ್ಕಾರವೆಂದರೆ ದೇಶವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ’ ಎಂದು ಅವರು ಹೇಳಿದ್ದಾರೆ.
‘ಅಮೆರಿಕ, ಇಂಗ್ಲೆಂಡ್ ಮತ್ತಿತರ ದೇಶಗಳ ಸಂಸದರು ರೈತರಿಗೆ ಬೆಂಬಲ ಸೂಚಿಸಿದ್ದು ಕೇಂದ್ರ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಅವರೆಲ್ಲರೂ ರೈತರ ಶಾಂತಿಯುತ ಪ್ರತಿಭಟನೆಯ ಮಾನವ ಹಕ್ಕನ್ನು ಮಾತ್ರ ಪ್ರತಿಪಾದಿಸಿದ್ದಾರೆಯೇ ಹೊರತು ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಿಲ್ಲ’ ಎಂದು ಅವರು ಹೇಳಿದ್ದಾರೆ.
‘ನಮ್ಮ ಆಂತರಿಕ ಆಗು ಹೋಗುಗಳ ಕುರಿತು ಹೊರಗಿನವರ ಆಕ್ಷೇಪಣೆ ಸಲ್ಲದು ಎನ್ನುವುದಾದರೆ, ದಶಕಗಳ ಹಿಂದೆ ವಿಶ್ವಸಂಸ್ಥೆ ರಚಿಸಿದ ಮಾನವ ಹಕ್ಕುಗಳ ಒಡಂಬಡಿಕೆಗೆ ಭಾರತ ಬದ್ಧವಾಗಿರುವುದರ ಅರ್ಥವೇನು? ಇತ್ತೀಚೆಗೆ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ನಾಶಮಾಡಿದ್ದರ ವಿರುದ್ಧ ನಮ್ಮ ಸರ್ಕಾರದ ಖಂಡನೆ ಸರಿಯೇ ಅಥವಾ ತಪ್ಪೇ? ಲಕ್ಷಾಂತರ ಯಹೂದಿಗಳನ್ನು ಕೊಂದ ಹಿಟ್ಲರ್‌ನ ಕ್ರಮವನ್ನು ಎಲ್ಲ ದೇಶಗಳು ಖಂಡಿಸಿಲ್ಲವೇ’ ಎಂದು ಕಲಾವಿದೆ ಲಕ್ಷ್ಮೀ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.natio
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.