ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ಸಾಧಕರಿಗೆ ಡಾ. ಬಾಬು ಜಗಜೀವನ್‌ ರಾಂ ಪ್ರಶಸ್ತಿ

Last Updated 4 ಏಪ್ರಿಲ್ 2022, 19:20 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಏಳಿಗೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಸ್ವಯಂ ಪ್ರೇರಿತವಾಗಿ ತೊಡಗಿಸಿಕೊಂಡು ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ‘ಡಾ. ಬಾಬು ಜಗಜೀವನ್‌ ರಾಂ’ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಐವರನ್ನು (2018–19ರಿಂದ 2022–23ರವರೆಗೆ ಪ್ರತಿವರ್ಷ ಒಬ್ಬರಂತೆ) ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರು ದಾನಪ್ಪ ಸಿ. ನಿಲೋಗಲ್‌ (ಸಾಹಿತಿ, ಚಿಂತಕ, ಹೋರಾಟಗಾರ), ಮುನಿಸ್ವಾಮಿ (ಕಿನ್ನರಿ ನುಡಿಸುವವರು), ಆರ್‌.ಎಂ. ಕಾಂತರಾಜು (ಪರಿಶಿಷ್ಟ ಜಾತಿಯವರ ಅಭಿವೃದ್ಧಿ, ಸಮಾಜ ಸೇವೆ), ವೀರಪ್ಪ ಬಿ. ಸವಣೂರು (ತಳ ಸಮುದಾಯ ಒಗ್ಗೂಡಿಸಿ, ಜಾತ್ಯತೀತ ಮನೋಭಾವ ಮೂಡಿಸಲು ಶ್ರಮ), ಎನ್‌.ಡಿ. ವೆಂಕಮ್ಮ (ಲೇಖಕಿ, ಕವಯತ್ರಿ, ಕಥೆಗಾರ್ತಿ, ಪರಿಶಿಷ್ಟ ಮಹಿಳೆಯರ ಏಳಿಗೆಗಾಗಿ ಸೇವೆ)

ಪ್ರಶಸ್ತಿಯು ₹ 5 ಲಕ್ಷ ನಗದು, 20 ಗ್ರಾಂನ ಚಿನ್ನದ ಪದಕ, ಶಾಲು, ಫಲಕವನ್ನು ಹೊಂದಿದೆ. ಇದೇ 5ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯಲಿರುವ ಡಾ. ಬಾಬು ಜಗಜೀವನ್‌ ರಾಂ ಅವರ 115ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಏಳಿಗೆಗಾಗಿ, ಅಸ್ಪೃಶ್ಯ ನಿವಾರಣೆ, ದೌರ್ಜನ್ಯ ತಡೆ ಚಟುವಟಿಕೆಯಲ್ಲಿ ಸ್ವಯಂ ಪ್ರೇರಣೆಯಿಂದ ನಿರಂತರವಾಗಿ ತೊಡಗಿಸಿಕೊಂಡು ಶ್ರಮಿಸುವ ವ್ಯಕ್ತಿಗಳನ್ನು ಗುರುತಿಸಿ, ಪ್ರತಿವರ್ಷ ಡಾ. ಬಾಬು ಜಗಜೀವನ್‌ ರಾಂ ಸ್ಮರಣಾರ್ಥ ಪ್ರಶಸ್ತಿ ನೀಡಲಾಗುತ್ತಿದೆ. ಆದರೆ, ವಿಧಾನಸಭೆ, ಲೋಕಸಭೆ ಚುನಾವಣೆ, ಕೋವಿಡ್‌ ಮತ್ತಿತರ ಕಾರಣಗಳಿಗೆ 2018ರಿಂದ ಪ್ರಸಕ್ತ ಸಾಲಿನವರೆಗೆ ಡಾ. ಬಾಬು ಜಗಜೀವನ್‌ ರಾಂ ಜನ್ಮದಿನಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸಲು ಮತ್ತು ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲು ಸಾಧ್ಯವಾಗಿಲ್ಲ. ಇದೀಗ, ಆಯ್ಕೆ ಸಮಿತಿಯು ಅರ್ಜಿಗಳನ್ನು ಸ್ವೀಕರಿಸಿ, ಶಿಫಾರಸು ಮಾಡಿದವರಿಗೆ ಪ್ರಶಸ್ತಿ ಘೋಷಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT