ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆನ್‌ಲೈನ್‌ ಆಟಗಳನ್ನು ನಿಷೇಧಿಸಿ’

Last Updated 5 ಏಪ್ರಿಲ್ 2021, 15:43 IST
ಅಕ್ಷರ ಗಾತ್ರ

ಬೆಂಗಳೂರು: ‘ಆನ್‌ಲೈನ್‌ ಆಟಗಳು (ಗೇಮ್‌) ಮಕ್ಕಳಲ್ಲಿ ಹಿಂಸಾ ಪ್ರವೃತ್ತಿ ಬಿತ್ತುತ್ತಿವೆ. ಸರ್ಕಾರವು ಈಗಾಗಲೇ ಅನೇಕ ಆಟಗಳನ್ನು ನಿಷೇಧಿಸಿದೆ. ಹೀಗಿದ್ದರೂ ಅದೇ ಮಾದರಿಯ ಬೇರೆ ಆಟಗಳು ಹುಟ್ಟಿಕೊಂಡಿವೆ. ಇವುಗಳನ್ನು ಕೂಡಲೇ ನಿಷೇಧಿಸಿ’ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್‌ನ ನಿರ್ದೇಶಕ ನಾಗಸಿಂಹ ಜಿ.ರಾವ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

‘ಆನ್‌ಲೈನ್‌ ಆಟಗಳು ಯುದ್ಧ, ಹೊಡೆದಾಟ, ಕೊಲೆ, ಆತ್ಮಹತ್ಯೆ ಹೀಗೆ ಅನೇಕ ಅಂಶಗಳ ಆಧಾರದಲ್ಲಿ ರಚಿತವಾಗಿವೆ. ಇಂತಹ ಆಟಗಳತ್ತ ಮಕ್ಕಳು ಹೆಚ್ಚು ಆಕರ್ಷಿತರಾಗುತ್ತಿರುವುದು ಅಪಾಯಕಾರಿ. ಇವು ಹರೆಯದ ಮಕ್ಕಳಲ್ಲಿ ಅಪರಾಧ ಮನೋಭಾವ ಬೆಳೆಸುತ್ತಿವೆ. ಉಳ್ಳಾಲದಲ್ಲಿ ಇತ್ತೀಚೆಗೆ ನಡೆದ ಬಾಲಕನ ಕೊಲೆ ಇದಕ್ಕೊಂದು ನಿದರ್ಶನ’ ಎಂದು ಹೇಳಿದ್ದಾರೆ.

‘ಕೋವಿಡ್‌ ಕಾರಣ ಮನೆಯಲ್ಲೇ ಇರುವ ಮಕ್ಕಳು ಮೊಬೈಲ್‌ ಬಳಕೆಯ ಗೀಳು ಬೆಳೆಸಿಕೊಂಡಿದ್ದಾರೆ. ಮೊಬೈಲ್‌ನಲ್ಲಿ ತಮ್ಮ ಮಕ್ಕಳು ಏನು ಮಾಡುತ್ತಿರುತ್ತಾರೆ ಎಂಬುದನ್ನು ಪೋಷಕರೂ ಗಮನಿಸುವುದಿಲ್ಲ. ಆನ್‌ಲೈನ್‌ ಆಟಗಳಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆಯೂ ಅವರಿಗೆ ಅರಿವಿರುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT