ಶನಿವಾರ, ಸೆಪ್ಟೆಂಬರ್ 18, 2021
28 °C

ಉದ್ಯಮಿಗಳೊಂದಿಗೆ ನಡೆದ ಸರ್ಕಾರಿ ಸಭೆಯಲ್ಲಿ ಬೊಮ್ಮಾಯಿ ಪುತ್ರ: ಕಾಂಗ್ರೆಸ್ ಟ್ವೀಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉದ್ಯಮಿಗಳೊಂದಿಗೆ ನಡೆದ ಸರ್ಕಾರಿ ಸಭೆಯಲ್ಲಿ ನಿಮ್ಮ ಪುತ್ರನದ್ದೇನು ಪಾತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯ ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಉದ್ಯಮಿಗಳೊಂದಿಗೆ ನಡೆದ ಸಭೆಯ ಚಿತ್ರವನ್ನು ಹಂಚಿಕೊಂಡಿದೆ. ಆ ಚಿತ್ರದಲ್ಲಿ ಸಿಎಂ ಬೊಮ್ಮಾಯಿ ಅವರ ಪುತ್ರನ ಮುಖವನ್ನು ಗುರುತು ಮಾಡಲಾಗಿದೆ.

'ಉದ್ಯಮಿಗಳೊಂದಿಗಿನ ಸರ್ಕಾರಿ ಸಭೆಯಲ್ಲಿ ನಿಮ್ಮ ಪುತ್ರನದ್ದೇನು ಪಾತ್ರ ಬೊಮ್ಮಾಯಿ ಅವರೇ? ಕುಟುಂಬ ರಾಜಕಾರಣದ ಪರಂಪರೆ ಮುಂದುವರೆಸುವ ಇರಾದೆಯೇ? ಯಡಿಯೂರಪ್ಪನವರ ಅಧಿಕಾರದಲ್ಲಿ ಬಿ.ವೈ.ವಿಜಯೇಂದ್ರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿದ್ದರು. ಈಗ ತಾವೂ ಅದೇ ದಾರಿಯಲ್ಲಿ ಹೊರಟಿರುವಿರಾ' ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ದೃತರಾಷ್ಟ್ರಪ್ರೇಮ ಒಳ್ಳೆಯದಲ್ಲ ಎಂದೂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು