ಸೋಮವಾರ, ಜನವರಿ 18, 2021
15 °C

ಪರಿಷತ್‌ ಗಲಾಟೆ: ಸಮಿತಿ ರಚಿಸಲು ಸಭಾಪತಿಗೆ ಹೊರಟ್ಟಿ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಿಧಾನ ಪರಿಷತ್‌ನಲ್ಲಿ ಡಿ.15 ರಂದು ನಡೆದಂತಹ ಘಟನೆಗಳು ಮರುಕಳಿಸದಂತೆ ನಿಯಮಾವಳಿಗೆ ಸೂಕ್ತ ಮಾರ್ಪಾಡು ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣ್ಯರ ಸಮಿತಿ ರಚಿಸಬೇಕು ಎಂದು ವಿಧಾನ ಪರಿಷತ್‌
ಸದಸ್ಯ ಬಸವರಾಜ ಹೊರಟ್ಟಿ, ಪರಿಷತ್‌ ಸಭಾಪತಿ ಅವರಿಗೆ ಪತ್ರ ಬರೆದಿದ್ದಾರೆ.

ಪರಿಷತ್‌ನಲ್ಲಿ ನಡೆದ ಘಟನೆಯ ಭಾಗವಾಗಿರುವ ಪ್ರತಿ ಸದಸ್ಯರಿಗೂ ಅದು ಕಪ್ಪುಚುಕ್ಕೆಯಾಗಿ ಹೊರಹೊಮ್ಮಿದೆ. ಎಲ್ಲರಿಗೂ ತಪ್ಪಿನ ಅರಿವು ಆಗುವುದರ ಜತೆಗೆ ಇಂತಹ ಅಪವಸ್ಯಕ್ಕೆ ಇನ್ನೊಮ್ಮೆ ಈಡಾಗುವುದಿಲ್ಲ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ ಎಂದಿದ್ದಾರೆ.

ನೀವು ಮಾಡಿರುವ ಸದನ ಸಮಿತಿಯ ಕುರಿತು ಅಪಸ್ವರಗಳು ಕೇಳಿ ಬಂದಿವೆ. ಕಾನೂನು ಸಚಿವರೂ ಸಮಿತಿಗೆ ಮಾನ್ಯತೆ ಇಲ್ಲವೆಂದಿದ್ದಾರೆ. ಸದನದ ಘನತೆ ಎತ್ತಿ ಹಿಡಿಯಲು ಶ್ರಮಿಸಿದ ನಮ್ಮ ಹಿಂದಿನ ಮುತ್ಸದ್ದಿ ಸದಸ್ಯರಿಗೆ ಅಪಚಾರವೆಸಗಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು