ಬುಧವಾರ, ಆಗಸ್ಟ್ 10, 2022
20 °C

ಕೋವಿಡ್‌ನಿಂದ ಗುಣಮುಖ: ಕೃಷಿ ಕಾಯಕದಲ್ಲಿ ಹೊರಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌–19 ಬಾಧಿತರಾಗಿದ್ದ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ ನಂತರ ತಾಲ್ಲೂಕಿನ ಛಬ್ಬಿ ಬಳಿ ಇರುವ ತಮ್ಮ ‘ನಿಸರ್ಗ’ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೋವಿಡ್‌ನಿಂದ ಚೇತರಿಸಿಕೊಂಡ ನಂತರ ಬಹಳಷ್ಟು ಮಂದಿ ಆತಂಕದಲ್ಲಿಯೇ ಕೆಲ ದಿನಗಳನ್ನು ದೂಡುತ್ತಾರೆ. ಆದರೆ, ಹೊರಟ್ಟಿ ಅವರು, ಟ್ರಾಕ್ಟರ್‌ ಹಾಗೂ ನೇಗಿಲು ಹೂಡಿ, ಉಳುಮೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಗಾರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವಕರು ನಾಚುವಂತೆ ಕೆಲಸ ಮಾಡುತ್ತಿದ್ದಾರೆ.

ಕೃಷಿ ಹಾಗೂ ಹೈನುಗಾರಿಕೆ ಬಗೆಗೆ ಮೊದಲಿನಿಂದಲೂ ಆಸಕ್ತಿ ಹೊಂದಿರುವ ಅವರು, ತಮ್ಮ ತೋಟವನ್ನು ಕೃಷಿಕರಿಗೆ ಮಾದರಿ ಆಗುವಂತೆ ನಿರ್ವಹಿಸಿದ್ದಾರೆ. ಸಭಾಪತಿಯಾದ ನಂತರವೂ ಕೃಷಿ ಚಟುವಟಿಕೆಯಿಂದ ದೂರ ಸರಿದಿಲ್ಲ.

‘ಹಿಂದೆ ಟ್ರಾಕ್ಟರ್‌ ಮೂಲಕ ಉಳುಮೆ ಮಾಡುತ್ತಿದ್ದೆ. ಇತ್ತೀಚಿನ ವರ್ಷಗಳಲ್ಲಿ ಮಾಡಿರಲಿಲ್ಲ. ಪುನಃ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಖುಷಿ ತಂದಿದೆ’ ಎನ್ನುತ್ತಾರೆ ಬಸವರಾಜ ಹೊರಟ್ಟಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು