ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಇಎಲ್: ರಕ್ಷಣಾ ಸಾಮಗ್ರಿಗಳ ಪ್ರದರ್ಶನ

ಇದೇ 19ರವರೆಗೆ ಪ್ರದರ್ಶನ: ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ
Last Updated 16 ಡಿಸೆಂಬರ್ 2021, 22:14 IST
ಅಕ್ಷರ ಗಾತ್ರ

ಬೆಂಗಳೂರು: ಜಾಲಹಳ್ಳಿ ಬಳಿ ಇರುವ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್) ಆವರಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ‘1954ರಿಂದ ಬಿಇಎಲ್‌ನ ಪಯಣ’ ಅನಾವರಣ ಕಾರ್ಯಕ್ರಮ ಭಾನುವಾರ ಸಂಪನ್ನಗೊಳ್ಳಲಿದೆ.

ಈ ವಸ್ತು ಪ್ರದರ್ಶನಕ್ಕೆ ರಕ್ಷಣಾ ಸಾಮಗ್ರಿಗಳ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರುಇತ್ತೀಚೆಗೆ ಆನ್‌ಲೈನ್‌ನಲ್ಲೇ ಚಾಲನೆ ನೀಡಿದ್ದರು.

‘ಸ್ವಾತಂತ್ರ್ಯ ಬಂದ ನಂತರವೂ ದೇಶದ ರಕ್ಷಣಾ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನವನ್ನು ನೀಡಿರಲಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನಹೂಡಿಕೆ, ನಾವೀನ್ಯತೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯ ಕೊರತೆಯಿಂದಾಗಿ ರಕ್ಷಣಾ ಕ್ಷೇತ್ರ ಹಿಂದುಳಿದಿತ್ತು’ ಎಂದು ರಾಜನಾಥ್ ಸಿಂಗ್ ಹೇಳಿದರು.

ಬಿಇಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದಿ ರಾಮಲಿಂಗಂ, ನಿರ್ದೇಶಕ ವರ್ಗ ಹಾಗೂ ಅಧಿಕಾರಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಮೃತ ಮಹೋತ್ಸವದ ಅಂಗವಾಗಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌), ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ (ಬಿಇಎಂಎಲ್‌) ಸೇರಿದಂತೆ ಬೆಂಗಳೂರಿನ ವಿವಿಧೆಡೆ ಇರುವ ರಕ್ಷಣಾ ಕ್ಷೇತ್ರದ ಉದ್ದಿಮೆಗೆ ಸಂಬಂಧಿಸಿದ ಸರ್ಕಾರಿ ಸಂಸ್ಥೆಗಳಲ್ಲೂ ವಸ್ತು ಪ್ರದರ್ಶನ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಸ್ತು ಪ್ರದರ್ಶನವುಡಿ.19ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ವಸ್ತು ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಬಿಇಎಲ್‌ ಸಾಮರ್ಥ್ಯ ದರ್ಶನ
ಬಿಇಎಲ್‌ ನಿರ್ಮಿಸಿರುವ ರೇಡಾರ್ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು ಹಾಗೂ ಇತರ ವಿಶಿಷ್ಟ ಉಪಕರಣಗಳನ್ನು ಪ್ರದರ್ಶಿಸಲಾಗಿದೆ. ತೇಜಸ್ ಯುದ್ದ ವಿಮಾನದ ಹಾರಾಟ ನಿಯಂತ್ರಣ ವ್ಯವಸ್ಥೆ, ಮಾನವ ರಹಿತ ವಿಮಾನ ರುಸ್ತುಂ, ಆಕಾಶ್ ಕ್ಷಿಪಣಿ, ಮಾನವ ರಹಿತ ಟ್ರ್ಯಾಕರ್ ಹಾಗೂ ವಿವಿಧ ಡ್ರೋನ್‌ಗಳೂ ಪ್ರದರ್ಶನದಲ್ಲಿವೆ.

‘ಸಿಕ್ಯುಎ (ಎಲ್‌) ನಿಂದ 150 ವರ್ಷಗಳಿಂದ ಯುದ್ಧ ಸಲಕರಣೆ ಪೂರೈಕೆ’
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಜೆ.ಸಿ.ನಗರದ ಸಿಕ್ಯುಎ(ಎಲ್‌) ಸಂಸ್ಥೆಯ ಆವರಣದಲ್ಲಿ ಇದೇ 19ರವರೆಗೆ ಆಯೋಜಿಸಿರುವ ರಕ್ಷಣಾ ಸಾಮಾಗ್ರಿಗಳ ವಸ್ತು ಪ್ರದರ್ಶನಕ್ಕೆ ಸಂಸ್ಥೆಯ ನಿಯಂತ್ರಕ ಕೆ.ಪಿ.ಕುಮಾರ್‌ ಚಾಲನೆ ನೀಡಿದರು.

‘ಸಿಕ್ಯುಎ (ಎಲ್‌) ಸಂಸ್ಥೆಯು 150 ವರ್ಷಗಳಿಂದ ದೇಶದ ರಕ್ಷಣಾ ಪಡೆಗಳಿಗೆ ಯುದ್ಧ ಸಲಕರಣೆಗಳನ್ನು ಪೂರೈಸುತ್ತಿದೆ. ಸಶಸ್ತ್ರಪಡೆಗಳ ಸಾಮರ್ಥ್ಯವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ದೇಶದ 75 ಪ್ರದೇಶಗಳಲ್ಲಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸೇನಾಪಡೆ ಹಾಗೂ ನೌಕಾಪಡೆಗಳಲ್ಲಿ ಬಳಸುವ ಸಲಕರಣೆಗಳ ಕುರಿತು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಮಾಹಿತಿ ಒದಗಿಸುವುದೂ ಇದರ ಉದ್ದೇಶ’ ಎಂದು ಅವರು ಹೇಳಿದರು.

‘ಸಿಯಾಚಿನ್‌ನಲ್ಲಿ ಮೈಕೊರೆಯುವ ಚಳಿ ಇರುತ್ತದೆ. ಅಲ್ಲಿ ಪಹರೆ ಕಾಯುವ ಸೈನಿಕರಿಗೆ ವಿಶೇಷ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತದೆ. ಆ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸೇನೆಯಲ್ಲಿ ಉಪಯೋಗಿಸುವ ಸಂವಹನ ಸಲಕರಣೆಗಳು, ರೇಡಾರ್‌ಗಳು, ಬಂದೂಕುಗಳು, ಎಲೆಕ್ಟ್ರಾನಿಕ್‌ ಉಪಕರಣಗಳು, ಮೈಂಡ್ ಡಿಟೆಕ್ಟರ್‌ ಹಾಗೂ ನೌಕಾಪಡೆಯಲ್ಲಿ ಬಳಸುವ ಜಿಪಿಎಸ್‌ ಹಾಗೂ ಇತರೆ ಉಪಕರಣಗಳನ್ನೂ ಪ್ರದರ್ಶನದಲ್ಲಿ ಇಡಲಾಗಿದೆ. ಇದೇ 19ರ ಸಂಜೆ 5.30ರವರೆಗೂ ಪ್ರದರ್ಶನ ಇರಲಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT