ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋವಿ ಸಮುದಾಯದ ಶಕ್ತಿ ಪ್ರದರ್ಶನ: ಶೇ 50ರಷ್ಟು ಮೀಸಲಾತಿ ಕಲ್ಪಿಸಲು ಆಗ್ರಹ

ಪರಿಶಿಷ್ಟ ವಿದ್ಯಾರ್ಥಿಗಳಿಗಾಗಿ 100 ಹೊಸ ವಿದ್ಯಾರ್ಥಿನಿಲಯ ಸ್ಥಾಪನೆ: ಸಿ.ಎಂ
Last Updated 28 ಆಗಸ್ಟ್ 2022, 19:38 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಭೋವಿ ಜನಾಂಗದ ರಾಜ್ಯ ಮಟ್ಟದ ಸಮಾ ವೇಶವು ಇಲ್ಲಿನ ಅಮಾನಿಕೆರೆಯ ಗಾಜಿನಮನೆಯಲ್ಲಿ ಭಾನುವಾರ ನಡೆಯಿತು.

ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಭಾಗವಹಿಸಿದ್ದು, ಸಮುದಾಯದ ಬಲ ಪ್ರದರ್ಶಿಸಿದರು. ನಗರ ಹಲವು ಸಮುದಾಯಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗುತ್ತಿದೆ.

ಹಿಂದೆ ಕುರುಬರು, ಮಡಿವಾಳರ ರಾಜ್ಯಮಟ್ಟದ ಸಮಾವೇಶ ನಡೆದಿದ್ದವು. ಈಗ ಎರಡು ಸಮುದಾಯಗಳ ಸಮಾವೇಶಗಳು ಎರಡು ದಿನಗಳ ಅಂತರದಲ್ಲಿ ನಡೆದಿವೆ.

ರಾಷ್ಟ್ರೀಯ ಸಿದ್ಧರಾಮೇಶ್ವರ ಓಡ್ (ಭೋವಿ) ಯುವ ವೇದಿಕೆಯ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭೋವಿ ಜನಜಾಗೃತಿ ಸಮಾವೇಶದಲ್ಲಿ ಮುಖಂಡರು ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದರು.

‘ಕಲ್ಲು ಗಣಿಗಾರಿಕೆ ವೇಳೆ ಮೃತ ಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ₹10 ಲಕ್ಷ ಪರಿಹಾರ ನೀಡಬೇಕು. ಭೋವಿ ಸಮುದಾಯದವರು ಆರ್ಥಿಕವಾಗಿ ಸಬಲರಾಗಲು ಕಲ್ಲು ಗಣಿಗಾರಿಕೆಯಲ್ಲಿ ಶೇ 50 ಮೀಸಲಾತಿ ಕಲ್ಪಿಸಬೇಕು. ಪ್ರತಿ ಜಿಲ್ಲೆಗೊಂದು ಸಿದ್ಧರಾಮೇಶ್ವರ ಭವನ ನಿರ್ಮಾಣಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಭೋವಿ ಅಭಿವೃದ್ಧಿ ನಿಗಮಕ್ಕೆ ಈ ವರ್ಷ ₹175 ಕೋಟಿ ಯೋಜನೆ ರೂಪಿಸಲು ಸೂಚಿ ಸಲಾಗಿದೆ. ನಿಗಮಕ್ಕೆ ಒಂದು ವಾರದಲ್ಲಿ ಅಧ್ಯಕ್ಷರನ್ನು ನೇಮಿಸಲಾಗುವುದು’ ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳಿಗಾಗಿ 100 ವಿದ್ಯಾರ್ಥಿ ನಿಲಯಗಳನ್ನು ಹೊಸದಾಗಿ ಪ್ರಾರಂಭಿಸಲಾಗುತ್ತಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡ, ಕಲಬುರಗಿ, ಮಂಗಳೂರು ಸೇರಿದಂತೆ ಐದು ಕಡೆ 1 ಸಾವಿರ ವಿದ್ಯಾರ್ಥಿಗಳು ಉಳಿದುಕೊಳ್ಳಲು ಅವಕಾಶವಿರುವ ವಿದ್ಯಾರ್ಥಿ ನಿಲಯಗಳನ್ನು ಶುರು ಮಾಡಲಾಗುವುದು’ ಎಂದರು.

ಸಾವರ್ಕರ್‌ ಅಧ್ಯಯನ ಪೀಠಕ್ಕೆ ನೆರವು
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವಿನಾಯಕ ದಾಮೋದರ ಸಾವರ್ಕರ್‌ ಅಧ್ಯಯನ ಪೀಠ ಸ್ಥಾಪನೆ ಮಾಡುವುದು ವಿಶ್ವವಿದ್ಯಾನಿಲಯಕ್ಕೆ ಬಿಟ್ಟ ವಿಚಾರ. ಸಿಂಡಿಕೇಟ್‌ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದರೆ ಖಂಡಿತವಾಗಿ ಪೀಠ ಸ್ಥಾಪನೆಯಾಗುತ್ತದೆ. ಅದಕ್ಕೆ ಏನು ಸಹಾಯ ಬೇಕೋ ಅದನ್ನು ಸರ್ಕಾರದಿಂದ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ಅಧ್ಯಯನ ಪೀಠ, ಸಂಶೋಧನಾ ಕೇಂದ್ರ ಶುರು ಮಾಡಿದ್ದಾರೆ. ಅವೆಲ್ಲಆಗಿನ ಕಾಲದ ಒತ್ತಡಕ್ಕೆ ಮಾಡಿದ್ದಷ್ಟೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT