ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಬೀದರ್–ಬೆಂಗಳೂರು ವಿಮಾನ ಸೇವೆ

Last Updated 14 ಜೂನ್ 2022, 20:15 IST
ಅಕ್ಷರ ಗಾತ್ರ

ಬೀದರ್: ಬೀದರ್- ಬೆಂಗಳೂರು ನಡುವೆ‘ಸ್ಟಾರ್ ಏರ್’ ವಿಮಾನ ಸಂಚಾರ ಬುಧವಾರ (ಜೂನ್15) ಆರಂಭವಾಗಲಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ವಿಮಾನ ಸೇವೆಗೆ ಚಾಲನೆ ನೀಡುವರು.

ವಿಮಾನ ಸೇವೆಯು ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಲಭ್ಯವಿರಲಿದೆ. ಒಂದು ಬದಿಗೆ ಒಂದು ಮತ್ತು ಇನ್ನೊಂದು ಬದಿಗೆ ಎರಡು ಆಸನಗಳಿರುವ ವಿಮಾನದಲ್ಲಿ ಒಟ್ಟು 50 ಮಂದಿ ಸಂಚರಿಸಬಹುದು. 50 ನಿಮಿಷಗಳಲ್ಲಿ ವಿಮಾನ ಬೀದರ್‌ನಿಂದ ಬೆಂಗಳೂರಿಗೆ ತಲುಪಲಿದ್ದು, ಪ್ರಯಾಣ ದರ ₹ 2,599 ನಿಗದಿ ಪಡಿಸಲಾಗಿದೆ.

ಮಧ್ಯಾಹ್ನ 2.55ಕ್ಕೆ ವಿಮಾನ ಬೆಂಗಳೂರಿನಿಂದ ಹೊರಟು ಸಂಜೆ 4.05ಕ್ಕೆ ಬೀದರ್‌ಗೆ ಬರಲಿದೆ. ವಿಮಾನ ಪುನಃ ಸಂಜೆ 4.35ಕ್ಕೆ ಹೊರಟು ಬೆಂಗಳೂರಿಗೆ 5.45ಕ್ಕೆ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT